ಇವಿಎಂ ಸರಿ ಇಲ್ಲ ಕಣ್ರಿ – ಸಿದ್ದರಾಮಯ್ಯ ಅನುಮಾನ

ಗುಜರಾತ್​ನಲ್ಲಿ ಮತ್ತೆ ಬಿಜೆಪಿ ತನ್ನ ಗೆಲುವಿನ ಓಟ ಮುಂದುವರಿಸಿದೆ. ಸತತ 6 ನೇ ಭಾರಿ ಗುಜರಾತನಲ್ಲಿ ಬಿಜೆಪಿ ಸರ್ಕಾರ ಸ್ಥಾಪಿಸಿದೆ. ಈ ಮಧ್ಯೆ ಗುಜರಾತ ಬಿಜೆಪಿ ಗೆಲುವಿಗೆ ಸಿಎಂ ಸಿದ್ದರಾಮಯ್ಯ ಅಪನಂಬಿಕೆ ವ್ಯಕ್ತಪಡಿಸಿದ್ದು, ಅಮಾನ್ಯಿಕರಣ ಹಾಗೂ ಜಿಎಸ್​​ಟಿಯ ಸಮಸ್ಯೆ ಇದ್ದಾಗಲೂ ಗುಜರಾತ ಗೆಲುವು ಸಾಧಿಸಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ನಮಗೆ ಇವಿಎಂ ಮತಯಂತ್ರದ ಬಗ್ಗೆ ನನಗೆ ಅನುಮಾನವಿದೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

ಬಳ್ಳಾರಿಯಲ್ಲಿ 450 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆ ಇತ್ತು. ಆದರೇ ವಿಫಲವಾಗಿದೆ. ಆದರೇ ಗುಜರಾತನಲ್ಲಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರು ಅಲ್ಲೇ ಉಳಿದು ಮತಬೇಟೆ ನಡೆಸಿದ್ದಾರೆ. ಅಲ್ಲದೇ 50 ಬಾರಿ ಜನರ ಬಳಿ ಹೋಗಿ ಬೇಡಿದ್ದಾರೆ. ಹೀಗಾಗಿ ಮತದಾರರು ಒಲಿದಿರಬಹುದು. ಆದರೇ ಬಿಜೆಪಿ ಮತಪ್ರಮಾಣ ಕುಗ್ಗಿದೆ. ಹೀಗಾಗಿ ಬಿಜೆಪಿ ಗೆದ್ದು ಸೋತಂತೆ ಎಂದು ಟೀಕಿಸಿದ್ದಾರೆ.

ಇನ್ನು ರಾಹುಲ್ ಗಾಂಧಿ ಪ್ರಯತ್ನಕ್ಕೆ ಜನರು ಮನ್ನಣೆ ನೀಡಿದ್ದಾರೆ. ಹಿಂದೆಂದಿಗಿಂತ ಕಾಂಗ್ರೆಸ್​​ಗೆ ಈ ಭಾರಿ ಮತ ಪ್ರಮಾಣ ಹೆಚ್ಚಿದೆ. ಕರ್ನಾಟಕಕ್ಕೆ ಗುಜರಾತ್ ಹೋಲಿಕೆ ಸಲ್ಲದು. ನಮಗೆ ವಿರೋಧಿ ಅಲೆ ಇಲ್ಲ. ಕರ್ನಾಟಕಕ್ಕೆ ಈ ಚುನಾವಣೆ ಪರಿಣಾಮ ಬೀರಲ್ಲ ಎಂದರು. ಒಟ್ಟಿನಲ್ಲಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಗುಜರಾತನಲ್ಲಿ ಕಾಂಗ್ರೆಸ್ ಸೋತಿದ್ದರೂ ಸಿಎಂ ಸಿದ್ದರಾಮಯ್ಯ ಸೋಲು ಒಪ್ಪಿಕೊಳ್ಳದೇ ಇವಿಎಂ ಮೆಶಿನ್​ಗಳ ಮೇಲೆ ಅನುಮಾನ ಪಡುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

1 ಕಾಮೆಂಟ್

Comments are closed.