ಕಿರುಕುಳ- ಫೇಸ್ಬುಕ್ ಮಾಲಿಕನ ಸಹೋದರಿಗೆ ಲೈಂಗಿಕ ಕಿರುಕುಳ!!

Face Book founder Zuckerberg's Sister Sexually Harassed on US Flight.
Face Book founder Zuckerberg's Sister Sexually Harassed on US Flight.

ಲೈಂಗಿಕ ಕಿರುಕುಳ ಯಾರನ್ನೂ ಬಿಟ್ಟಿಲ್ಲ. ನಿಜ ನಾವೆಲ್ಲ ಪ್ರತಿನಿತ್ಯ ಬಳಕೆ ಮಾಡುವ ಫೇಸ್ಬುಕ್ ಸಂಸ್ಥಾಪಕ ಝುಕರ್​ಬರ್ಗ್​ ಸೋದರಿ  ಱಂಡಿ ಝುಕರ್​ಬರ್ಗ್ ಅವರು  ಅಲಸ್ಕಾ ಏರ್‌ಲೈನ್ಸ್‌ನಲ್ಲಿ ಲಾಸ್‌ ಎಂಜಲೀಸ್‌ನಿಂದ ಮಜತ್ಲಾನ್‌ಗೆ ಪ್ರಯಾಣಿಸುತ್ತಿದ್ದರು.

 

ಆಗ ಪಕ್ಕದಲ್ಲಿ ಕುಳಿತ ಸಹ ಪ್ರಯಾಣಿಕ ಇವರ ಜೊತೆ ಅಸಹ್ಯವಾಗಿ ವರ್ತಿಸಿದ್ದಲ್ಲದೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ.

ಈ ಬಗ್ಗೆ ಱಂಡಿ ಝುಕರ್​ಬರ್ಗ್ ಅವರು ಸಹೋದರನ ಸಂಸ್ಥೆಯ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇವರು ಫೇಸ್ಬುಕ್ ನ ಮಾಜಿ ಮಾರುಕಟ್ಟೆ ಅಭಿವೃದ್ಧಿ ನಿರ್ದೇಶಕಿಯಾಗಿದ್ದರು.

ಇಷ್ಟಾದರೂ ಗಗನ ಶಿಯರು ಆತನಿಗೆ ಏನೂ ಹೇಳುತ್ತಿರಲಿಲ್ಲವಂತೆ. ಆತ ನಿರಂತರವಾಗಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕನಾಗಿದ್ದು ಆತನನ್ನು ಪ್ರಶ್ನಿಸುವುದು ಸರಿಯಲ್ಲ ಅಂತ ಗಗನ ಸಖಿಯರು ಆತನಿಗೆ ಮದ್ಯ ಸರಬರಾಜು ಮಾಡಿದ್ರಂತೆ.  ನಮ್ಮ ಸುರಕ್ಷತೆಗಿಂತ ಆತನ ಡಾಲರ್‌ಗಳೆ ಹೆಚ್ಚು ಎಂದು ನಾನು ತಿಳಿದುಕೊಳ್ಳುತ್ತೇನೆ ಅಂತ ಆಂಡಿ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.