ಸಿಪಿಐ ಮತ್ತು ಎಐಕೆಎಸ್​​ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅನ್ನದಾತರ ಪಾದಯಾತ್ರೆ …

ಸಿಪಿಐ ಮತ್ತು ಎಐಕೆಎಸ್​​ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅನ್ನದಾತರ ಪಾದಯಾತ್ರೆ …

ಮಹಾರಾಷ್ಟ್ರದಲ್ಲಿ ಬುಡಕಟ್ಟು ಜನಾಂಗ, ಭೂರಹಿತ ಕೃಷಿಗಾರರು ಮತ್ತು ಸಣ್ಣ ರೈತರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಸಿಡಿದೆದಿದ್ದಾರೆ 

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅನ್ನದಾತರು ಮತ್ತೊಮ್ಮೆ ಸಿಡಿದೆದಿದ್ದು. ರೈತರ ಸಾಲಮನ್ನಾ, ಬೆಳೆಗಳಿಗೆ ಬೆಂಬಲ ಬೆಲೆ, ವಿಮೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರಿ ಸುಮಾರು 7500ಕ್ಕೂ ಹೆಚ್ಚು ಅನ್ನದಾತರು ನೀರು ಆಹಾರ ಸೇವಿಸದೇ, ಎಲ್ಲಿಯೂ ರೆಸ್ಟ್​ ತೆಗೆದುಕೊಳ್ಳದೇ ನಾಸಿಕ್​ನಿಂದ ಮುಂಬೈವರೆಗೂ ಬರೋಬ್ಬರಿ 180 ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡು ಸರ್ಕಾರದ ವಿರುದ್ಧ ಪ್ರತಿಭಟಿಸಿದ್ರು. ಸಿಪಿಐ ಮತ್ತು ಎಐಕೆಎಸ್​​ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.