ಪ್ರಧಾನಿ ಮೋದಿ ಜೊತೆ ಟ್ರಂಪ್ ಪುತ್ರಿ ಶೃಂಗ ಸಭೆ !! ಮುತ್ತಿನ ನಗರಿಗೆ ಮತ್ತೇರಿಸಿದ ಇವಾಂಕ !!

Ivanka Trump Visit to Hyderabad for Global Business Meet
Ivanka Trump Visit to Hyderabad for Global Business Meet

ಪ್ರಧಾನಿ ಮೋದಿ ಬರುತ್ತಾರೆ ಎಂದರೇ ಮತ್ತೇರುವ ನಗರಕ್ಕೆ ಮೋದಿ ಜೊತೆ ಅಮೇರಿಕಾ ಅಧ್ಯಕ್ಷರ ಪುತ್ರಿ ಇವಾಂಕ ಬರುತ್ತಾರೆ ಎಂದರೆ ಹೇಗಿರಬೇಡ ? ಇಂತಹುದೇ ಸ್ಥಿತಿ ಹೈದರಾಬಾದ್ ನಲ್ಲಿ ಏರ್ಪಟ್ಟಿದೆ.

ಹೌದು. ಇಂದಿನಿಂದ ಮೂರು ದಿನಗಳ ಕಾಲ ಹೈದರಾಬಾದ್ ನಗರದಲ್ಲಿ ಜಾಗತಿಕ ಉದ್ಯಮಶೀಲತಾ ಶೃಂಗಸಭೆ ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿ ಶೃಂಗ ಸಭೆಯನ್ನು ಉದ್ಘಾಟಿಸಲಿದ್ರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಈ ಮೇಳದ ಅತಿಥಿಗಳಲ್ಲಿ ಪ್ರಮುಖರು. ಈಗಾಗಲೇ ಮುತ್ತಿನ ನಗರಿಗೆ ಟ್ರಂಪ್ ಪುತ್ರಿ ಇವಾಂಕಾ ಬಂದಿಳಿದಿದ್ದಾರೆ.

Ivanka Trump Visit to Hyderabad for Global Business Meet
Ivanka Trump Visit to Hyderabad for Global Business Meet

ಅಮೆರಿಕದ ಉನ್ನತ ಅಧಿಕಾರಿಗಳ ನಿಯೋಗದ ನೇತೃತ್ವವನ್ನು ಇವಾಂಕ ವಹಿಸಿದ್ದಾರೆ. ಖಾಸಗಿ ಹೊಟೇಲ್​​ ತಾಜ್​​​ ಫಲಾಕುಮಾದಲ್ಲಿ ನಡೆಯುತ್ತಿರುವ ಗ್ಲೋಬಲ್ ವಾಣಿಜ್ಯೋದ್ಯಮ ಶೃಂಗಸಭೆಯಲ್ಲಿ ಇವಾಂಕ ಟ್ರಂಪ್​ ಭಾಗಿಯಾಗಲಿದ್ದಾರೆ.

ಇವಾಂಕ ಟ್ರಂಪ್ ಭಾಗವಹಿಸುವ ಹಿನ್ನಲೆಯಲ್ಲಿ ನಗರದಾದ್ಯಂತ ಭಾರೀ ಸೆಕ್ಯೂರಿಟಿ ಮಾಡಲಾಗಿದೆ. ಬರೋಬ್ಬರಿ ಹತ್ತು ಸಾವಿರ ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜಿಸಿಕೊಳ್ಳಲಾಗಿದೆ.

ಭಾರತ ಮತ್ತು ಅಮೆರಿಕ ಸೇರಿದಂತೆ ವಿವಿಧೆಡೆಯ 1,500 ಪ್ರತಿನಿಧಿಗಳು ಈ ಸಮ್ಮಿಟ್​ನಲ್ಲಿ ಭಾಗಿಯಾಗಲಿದ್ದಾರೆ. ಎರಡು ದಿನಗಳ ಸಮ್ಮಿಟ್​ ವಿಶ್ವದ ಅಪರೂಪದಲ್ಲಿ ಅಪರೂಪವೆನಿಸಿದ ಐಷಾರಾಮಿ ಹೋಟೆಲ್​ನಲ್ಲಿ ಈ ಶೃಂಗಸಭೆ ನಡೆಯುತ್ತಿದೆ.

Ivanka Trump Visit to Hyderabad for Global Business Meet
Ivanka Trump Visit to Hyderabad for Global Business Meet

ಶಂಶಾಬಾದ್​ ವಿಮಾನ ನಿಲ್ದಾಣಕ್ಕೆ ಇವಾಂಕಾ ಬಂದುಳಿಯಲಿದ್ದು, ಪ್ರಧಾನಿ ಮೋದಿ, ಬೇಗಮ್​​ ಪೇಟ್​ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಹೀಗಾಗಿ ಏರ್​​ಪೋರ್ಟ್​ನಿಂದ ತಾಜ್​​ ಹೋಟೆಲ್​​ವರೆಗೂ ಹೈ ಸೆಕ್ಯೂರಿಟಿ ಮಾಡಲಾಗಿದೆ.