ಚಾಯ್ ಕೇ ಸಾಥ್ ಮನ ಕೀ ಬಾತ್- ಉಗ್ರ ದಾಳಿಯಲ್ಲಿ ಮಡಿದವರಿಗೆ ಮೋದಿ ನಮನ

ಮನ್ ಕೀ ಬಾತ್

ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿಯವರ 38 ನೇ ಆವೃತ್ತಿಯ ಮನ್​ ಕೀ ಬಾತ್​​ ಇಂದು ಪ್ರಸಾರವಾಗಿದೆ. ಮೊದಲಿಗೆ ಸಂವಿಧಾನದ ಬಗ್ಗೆ ಮಾತನಾಡಿದ ಮೋದಿಯವರು ಸಂವಿಧಾನ ಪ್ರಜಾಪ್ರಭುತ್ವದ ಆತ್ಮ, ಇಂದು ನಮ್ಮ ಸಂವಿಧಾನ ಅಂಗೀಕಾರವಾದ ದಿನವಾಗಿದ್ದರಿಂದ, ಈ ದಿನವನ್ನು ಸಂವಿಧಾನ ದಿವಸ ಎಂದು ಆಚರಿಸಲಾಗುತ್ತದೆ ಎಂದರು.
ಇನ್ನು 26/11 ದಾಳಿಯಲ್ಲಿ ಮಡಿದವರಿಗೆ ಮೋದಿ ನಮನ ಸಲ್ಲಿಸಿದ್ದು, ಆತಂಕವಾದ ದೇಶಕ್ಕೆ ಮಾರಕ. ಉಗ್ರರ ದಮನಕ್ಕೆ ಭಾರತೀಯರೊಂದಿಗೆ ನಾನು ಸದಾ ಸಿದ್ಧ ಎಂದಿದ್ದಾರೆ. ಅಹಿಂಸೆಯಲ್ಲಿ ನಂಬಿಕೆ ಇರಿಸಿದವರು ಭಾರತೀಯರು, 40 ವರ್ಷಗಳಿಂದ ಭಾರತ ಉಗ್ರವಾದದ ಬಲಿಪಶುವಾಗಿದ್ದು ಅದನ್ನು ದಮನ ಮಾಡಲೇಬೇಕು ಎಂದು ಮೋದಿ ಕರೆಕೊಟ್ಟಿದ್ದಾರೆ.
ಕಾಂಗ್ರೆಸ್​ ನವರು ಸದಾ ಮೋದಿಯನ್ನು ಚಾಯ್ ವಾಲಾ ಎಂದು ಟೀಕಿಸುತ್ತಿದ್ದರಿಂದ ಇಂದಿನ ಮೋದಿ ಮನ್​​ ಕಿ ಬಾತ್​ನಲ್ಲಿ ಕಾಂಗ್ರೆಸ್​ ಟಾಂಗ್ ನೀಡಲು ಗುಜರಾತನಲ್ಲಿ ಬಿಜೆಪಿ ನಾಯಕರು ಚಾಯ್ ಹೀರುತ್ತಾ ಮೋದಿ ಮನ್ ಕಿ ಬಾತ್​ ಕೇಳಿ ಆನಂದಿಸಿದರು.