“ದೋಸ್ತಿ ಸರ್ಕಾರ ಖತಂ..??: ಸಿಎಮ್-ಗೋಯಲ್ ಭೇಟಿ..!!: ಏನಿದು ಹುನ್ನಾರ..??

ದೋಸ್ತಿ ಸರ್ಕಾರದಲ್ಲಿ ಲೋಕಸಭಾ ಚುಣಾವಣೆ ಸೀಟು ಹಂಚಿಕೆಯ ಬಗ್ಗೆ ಎದ್ದ ಭಿನ್ನಾಭಿಪ್ರಾಯದ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಯಾವುದೇ ಪೂರ್ವ ಯೋಜನೆಯಿಲ್ಲದೇ ಸಿ.ಎಮ್. ಗೃಹ ಕಛೇರಿ ಕೃಷ್ಣಾ ನಿವಾಸಕ್ಕೆ ಭೇಟಿ ಕೇಂದ್ರ ಸಚಿವ ಪಿಯುಶ್ ಗೋಯಲ್ ಭೇಟಿ ನೀಡಿದ್ದಾರೆ. ನಾಯಕರು ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು ,ಗೋಯಲ್ 13 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್ ಗೆ ನೀಡುವುದಾಗಿ ಒಪ್ಪಂದ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.

ಗುರುವಾರ ರಾತ್ರಿ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಲು ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಜೊತೆಗೆ ನಡುರಾತ್ರಿ ಕಾಂಗ್ರೆಸ್​ ನಾಯಕರು ಸಭೆ ನಡೆಸಿದ್ದು ರಾತ್ರಿ 11 ಗಂಟೆಯಿಂದ 2ರವರೆಗೆ ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ‌ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್, ಕೆಪಿಸಿ‌ಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ‌. ಶಿವಕುಮಾರ್ ಭಾಗಿಯಾಗಿದ್ದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು , ಈ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಮತ್ತು ಯಾವ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. . ಮಂಡ್ಯದಿಂದ ಸುಮಲತಾ ಅಂಬರೀಷ್ ಸ್ಪರ್ಧೆಯ ಬಗ್ಗೆಯೂ ರಾಜ್ಯ ನಾಯಕರು ವೇಣುಗೋಪಾಲ್​ ಅವರಿಗೆ ಮಾಹಿತಿ ನೀಡಿದ್ದಾರೆ. ಮೈತ್ರಿ ಸರ್ಕಾರದ ಇತ್ತೀಚಿನ ಕಾರ್ಯವೈಖರಿ, ಸಿಎಂ ಕುಮಾರಸ್ವಾಮಿ ಅವರ ಬೆಗ್ಗರ್ಸ್​ ಹೇಳಿಕೆ ಬಗ್ಗೆ ಕೂಡ ಕೆ ಸಿ ವೇಣುಗೋಪಾಲ್ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.