ಪ್ರಧಾನಿ ಮೋದಿ ಪೋಟೋ ವಿರೂಪಗೊಳಿಸಿದವರ ವಿರುದ್ಧ ದೂರು!!

ಚುನಾವಣೆಗೆ ಸಿದ್ಧತೆ ನಡೆಯುತ್ತಿರುವಂತೆಯೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್-ಜೆಡಿಎಸ್​- ಬಿಜೆಪಿ ಪರ ಕಾರ್ಯಕರ್ತರ ಪ್ರಚಾರ ಜೋರಾಗಿ ನಡೆದಿದೆ.

ad


ಅಷ್ಟೇ ಅಲ್ಲ ಬೇರೆ-ಬೇರೆ ಪಕ್ಷದ ನಾಯಕರ ವಿರುದ್ಧ ಟೀಕೆಯೂ ಹರಿದಾಡತೊಡಗಿದೆ. ಇದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಫೋಟೋವನ್ನು ವಿರೂಪಗೊಳಿಸಿದ ಆರೋಪದಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ಗ್ರಾಮದ ಪ್ರಕಾಶ್. ಕೆ ಎಂಬವರು ಫ್ರೆಂಡ್ಸ್ ಪಡುಬೆಟ್ಟು ಅನ್ನೋ ವಾಟ್ಸ್ ಅಪ್ ಗ್ರೂಪ್ ವಿರುದ್ಧ ಈ ದೂರು ನೀಡಿದ್ದಾರೆ.

 

ಮಾರ್ಚ್ 20 ರಂದು ಈ ಗ್ರೂಪ್ ನಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಅದ್ರಲ್ಲಿನ ಸದಸ್ಯನೊಬ್ಬ ಪ್ರಧಾನಿ ಮೋದಿಯ ಅವ್ರ ಚಿತ್ರವನ್ನು ವಿರೂಪಗೊಳಿಸಿ ಫೋಟೋ ಪೋಸ್ಟ್ ಮಾಡಿದ್ದಾನೆ.  ಈ ಫೋಟೋದಲ್ಲಿ ಪ್ರಧಾನಿ ಮೋದಿಯವ್ರ ಫೋಟೋಗೆ ಹಂದಿ ಮುಖವನ್ನು ಫಿಕ್ಸ್ ಮಾಡಿ ಹರಿ ಬಿಡಲಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ದೂರುದಾರ ಪ್ರಕಾಶ್ ಉಪ್ಪಿನಂಗಡಿ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ತನಿಖೆ ಕೈಗೊಂಡಿದ್ದಾರೆ.