ಆಸಿಯಾನ ಶೃಂಗಸಭೆಯಲ್ಲಿ ಮೋದಿ- ಭತ್ತದ ಗದ್ದೆಗಿಳಿದು ಅಚ್ಚರಿ ಮೂಡಿಸಿದ ಪ್ರಧಾನಿ

adಫಿಲಿಪಿನ್ಸ್​ನ ಮನೀಲಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 31ನೇ ಆಸಿಯಾನ್​​ ರಾಷ್ಟ್ರಗಳ ಶೃಂಗಸಭೆ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್​ ಪ್ರಧಾನಿ ಶಿಂಜೋ ಅಬೆ ಸೇರಿದಂತೆ ವಿಶ್ವದ ದಿಗ್ಗಜರು ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಮೋದಿ ಸೇರಿದಂತೆ ಜಾಗತಿಕ ನಾಯಕರಿಗೆ ಆಸಿಯಾನ್‌ ಶೃಂಗಸಭೆಯ ಆತಿಥ್ಯ ವಹಿಸಿಕೊಂಡ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ಡುಟರ್ಟೆ ಪಾಸಯ್‌ ನಗರದಲ್ಲಿ ಔತಣಕೂಟ ಏರ್ಪಡಿಸಿದ್ದರು. ಟ್ರಂಪ್‌, ಕೆಕಿಯಾಂಗ್‌ ಅವರಲ್ಲದೆ, ಜಪಾನ್ ಪ್ರಧಾನಿ ಶಿಂಜೋ ಅಬೆ, ರಷ್ಯಾ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್‌, ಮಲೇಷ್ಯಾ ಪ್ರಧಾನಿ ನಜೀಬ್‌ ರಜಾಕ್‌ ಜತೆ ಮೋದಿ ಅವರು ಅನೌಪಚಾರಿಕ ಮಾತುಕತೆ ನಡೆಸಿದರು. ಇಂದು ಡೊನಾಲ್ಡ್‌ ಟ್ರಂಪ್‌ ಮತ್ತು ನರೇಂದ್ರ ಮೋದಿ ಅವರ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿದ್ದು, ಭಾರಿ ಮಹತ್ವ ಪಡೆದುಕೊಂಡಿದೆ.

ಮಾತುಕತೆ ವೇಳೆ ದಕ್ಷಿಣ ಚೀನಾ ಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸೇನಾ ಚಟುವಟಿಕೆ, ಇಂಡೋ–ಫೆಸಿಪಿಕ್‌ ಭಾಗದಲ್ಲಿ ಪ್ರಾದೇಶಿಕ ಸ್ಥಿರತೆ, ಶಾಂತಿ ಮತ್ತು ರಕ್ಷಣಾ ಪರಿಸ್ಥಿತಿ ಸೇರಿದಂತೆ ಅನೇಕ ಪ್ರಮುಖ ವಿಷಯಗಳು ಮಾತುಕತೆಯ ವೇಳೆ ಪ್ರಸ್ತಾಪವಾಗುವ ನಿರೀಕ್ಷೆ ಇದೆ.ಇದೇ ವೇಳೆ ಪ್ರಧಾನಿ ಮೋದಿ ಅವ್ರು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಜತೆ ಅಧಿಕೃತ ಭೇಟಿಗೂ ಮುನ್ನ ಅನೌಪಚಾರಿಕ ಮಾತುಕತೆ ನಡೆಸಿದ್ರು. ಮಾತುಕತೆಯಲ್ಲಿ ಚೀನಾ ವಿಚಾರ ಪ್ರಮುಖವಾಗಿ ಚರ್ಚೆಗೆ ಬಂದಿದೆ. ಇನ್ನು ತಮ್ಮ ಪ್ರವಾಸದ ವೇಳೆ ಮೋದಿ ಫಿಲಿಪ್ಪೀನ್ಸ್‌ನ ಮಹಾವೀರ ಪ್ರತಿಷ್ಠಾನ ಮತ್ತು ಅಂತರರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ್ರು. ಸಂಶೋಧನಾ ಸಂಸ್ಥೆಗೆ ಸೇರಿದ ಗದ್ದೆಯಲ್ಲಿ ಸಲಾಕೆ-ಗುದ್ದಲಿ ಹಿಡಿದು ರೈತರಂತೆ ಮಣ್ಣಿನಲ್ಲಿ ಕೆಲಸ ಮಾಡಿ ಮನಸೆಳೆದರು.