ರಾಹುಲ್​ ಗಾಂಧಿ ದೇಶದಲ್ಲಿ ಎಲ್ಲೇ ಚುನಾವಣೆಗೆ ನಿಂತರೂ ಸೋಲುತ್ತಾರೆ- ಹುಬ್ಬಳ್ಳಿಯಲ್ಲಿ ಬಿಎಸ್​ವೈ ಭವಿಷ್ಯನುಡಿ!

ಅತ್ತ ಕಾಂಗ್ರೆಸ್​ ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್​ ಗಾಂಧಿಯನ್ನು ಬೀದರ್​ನಲ್ಲಿ ಕಣಕ್ಕಿಳಿಸಿ ಕಾಂಗ್ರೆಸ್​​ ಬಲಗೊಳಿಸುವತ್ತ ಚಿಂತನೆ ನಡೆಸಿದ್ದರೇ, ಇತ್ತ ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ಟೀಕೆ ಮುಂದುವರೆಸಿದ್ದಾರೆ.

ad

ದೇಶದ ಯಾವುದೇ ರಾಜ್ಯದಲ್ಲಿ ಸ್ಪರ್ಧೆ ಮಾಡಿದ್ರೂ ನಾನು ಗೆಲ್ಲೋದಿಲ್ಲ ಅನ್ನೋದು ರಾಹುಲ್​ಗೆ ಗೊತ್ತಾಗಿದೆ. ಹೀಗಾಗಿ ರಾಹುಲ್​ ಗಾಂಧಿ ಬೀದರ್​ ಮೊರೆ ಹೋಗುತ್ತಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಬಿಎಸ್​ವೈ, ರಾಹುಲ್ ಗಾಂಧಿ ಕರ್ನಾಟಕ ರಾಜಕಾರಣ ಸೇಫ್​ ಎಂದು ಭಾವಿಸಿದಂತಿದೆ. ಆದರೇ ಕರ್ನಾಟಕದ ಜನರು ರಾಹುಲ್ ಗಾಂಧಿಯನ್ನು ತಿರಸ್ಕರಿಸುತ್ತಾರೆ. ಇದು ಕಾಂಗ್ರೆಸ್​ನ ದಯನೀಯ ಸ್ಥಿತಿಗೆ ಸಾಕ್ಷಿ ಎಂದರು.

ಇನ್ನು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್​ವೈ, ಕುಮಾರಸ್ವಾಮಿ ಉತ್ತರ ಕರ್ನಾಟಕವನ್ನ ಮರೆತಿದ್ದಾರೆ. ಕರ್ನಾಟಕದಲ್ಲಿ 13 ಜಿಲ್ಲೆಗಳಲ್ಲಿ ಬರಗಾಲ ಪರಿಸ್ಥಿತಿ ಇದೆ‌. ನೂತನ ತಾಲೂಕಿಗಳಿಗೆ ತಹಶಿಲ್ದಾರ ನೇಮಕ ಬಿಟ್ಟು ಬೇರೆ ಏನೂ ಮಾಡಿಲ್ಲ. ಅವರು ಲಿಂಗಾಯತ ಮುಖ್ಯಮಂತ್ರಿಗಳು ಏನೂ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ, ಮೊದಲು ದೇವೇಗೌಡರು ಏನ ಮಾಡಿದ್ದಾರೆ ಅದನ್ನು ಹೇಳಲಿ ಈಗ ಅವರ ಮಗ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೇವೇಗೌಡ್ರ ವಿರುದ್ಧ ಬಿಎಸ್‌ವೈ ವಾಗ್ದಾಳಿ ನಡೆಸಿದರು