ಆಕೆಗೆ ರಾತ್ರಿ‌ ಬೆಳಗಾಗೋದ್ರಲ್ಲಿ ಸೃಷ್ಟಿಯಾದ್ರು ಲಕ್ಷಾಂತರ‌ ಫಾಲೋವರ್ಸ್ ! ಇಷ್ಟಕ್ಕೂ ಆರ್ ಸಿ ಬಿ ಮ್ಯಾಚ್ ವೇಳೆ ಮನಸೆಳೆದ‌ ರೆಡ್ ಡ್ರೆಸ್ ಸುಂದರಿ ಯಾರು ಗೊತ್ತಾ!!

ಚಿನ್ನಸ್ವಾಮಿಯಲ್ಲಿ ಅಂಗಳದಲ್ಲಿ ನಿನ್ನೆ ಆರ್.ಸಿ.ಬಿ ಹಾಗೂ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ಕೊನೆಯ ರೋಚಕ ಪಂದ್ಯ ನಡೆದಿತ್ತು. ಆದರೆ, ಆರ್​ಸಿಬಿ ನಿನ್ನೆಯ ಪಂದ್ಯದಲ್ಲಿ ಗೆದ್ದ ಸುದ್ದಿಯ ಜೊತೆಗೆ ಆರ್​​ಸಿಬಿ ಅಭಿಮಾನಿಯೊಬ್ಬಳ ಸುದ್ದಿಯು ಸದ್ಯ ಭಾರೀ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.

ad

ಹೌದು ನಿನ್ನೆ ಐಪಿಎಲ್​​ ಕ್ರಿಕೆಟ್ ಮ್ಯಾಚ್ ನಲ್ಲಿ  ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಗೆಲುವಿನೊಂದಿಗೆ 12ನೇ ಆವೃತ್ತಿಯ ಐಪಿಎಲ್​ಗೆ ವಿರಾಟ್ ಟೀಂ ವಿದಾಯ ಹೇಳಿತು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಈ ವೇಳೆ ಆರ್​ಸಿಬಿ ತಂಡಕ್ಕೆ ಪ್ರೋತ್ಸಾಹ ನೀಡಿಲು ಬಂದಿದ್ದ ಚೆಲುವೆಯೊಬ್ಬಳು ಕ್ಯಾಮೆರಮನ್​​​ ಕಣ್ಣಿಗೆ ಸೆರೆಬಿದ್ದು ಈಗ ರಾತ್ರಿ ಕಳೆದ ಬೆಳಕು ಹರಿಯುವ ಮುನ್ನವೇ ಆರ್​ಸಿಬಿಯ ಅಭಿಮಾನಿ ಯುವಕರ ಹೃದಯಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲಾತಾಣಗಳಲ್ಲಿ ಈಕೆಯ ಫೋಟೊ ವೀಡಿಯೋ ವೈರಲ್ ಆಗುತ್ತಿದೆ.

ಈಕೆ ಯಾರು, ಈಕೆಯ ಹೆಸರೇನು ಎಂದು ಹುಡುಗರು ಸಾಮಾಜಿಕ ಜಾಲಾತಾಣಗಳಲ್ಲಿ ಇವಳ ಬಗ್ಗೆ ತಿಳಿದುಕೊಳ್ಳಲು ಕಾತೊರೆಯುತ್ತಿದ್ದಾರೆ.

ಆರ್​ಸಿಬಿ-ಹೈದರಾಬಾದ್ ಪಂದ್ಯ ಆಗುವ ವೇಳೆ ಕ್ಯಾಮೆರಮನ್​​​ ಕಣ್ಣಿಗೆ ಕಂಡ ಈ ಮುದ್ದಾದ ಹುಡುಗಿಯ ಹೆಸರು ದೀಪಿಕಾ. ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಂತೆ. ಆರ್​ಸಿಬಿಗೆ ಪ್ರೋತ್ಸಾಹ ನೀಡಲು ಬಂದಿದ್ದ ಇವರು ರೆಡ್ ಕ್ರಾಪ್ ಹಾಗೂ ಟಾಪ್ ಧರಿಸಿ ಮಿಂಚುತ್ತಿದ್ದರು. ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಚೆಂಡನ್ನು ಬೌಂಡರಿ-ಸಿಕ್ಸರ್​​ಗೆ ಅಟ್ಟಿದಾಗಲೆಲ್ಲ ಕ್ಯಾಮೆರಮಾನ್​​ ಈ ಹುಡುಗಿಯ ಕಡೆ ಕ್ಯಾಮೆರ ತಿರುಗಿಸಿ, ತಿರುಗಿಸಿ, ಈ ಮಟ್ಟಿಗೆ ವೈರಲ್ ಆಗುವಂತೆ ಮಾಡಿದ್ದಾರೆ.

ಕೆಲವಿ ತಿಂಗಳ ಹಿಂದೆ ಮಾಲಯಾಳಂ ಚಿತ್ರದ ನಾಯಕಿ ಪ್ರಿಯಾ ವಾರಿಯರ್ ಕೇವಲ ತನ್ನ ಕಣ್ ಸನ್ನೆಯ ಮೂಲಕ ರಾತ್ರೊ ರಾತ್ರಿ ಇಡೀ ವಿಶ್ವದ ಕ್ರಶ್ ಆಗಿಹೋಗಿದ್ದರು ಆದರೆ ಇದೀಗಾ ದೀಪಿಕಾ ಫೋಟೊ ಇನ್​​ಸ್ಟಾಗ್ರಾಂ, ಫೇಸ್​​ಬುಕ್​​, ವಾಟ್ಸ್​​ಆ್ಯಪ್​​​ನಲ್ಲಿ ಭಾರೀ ಹರಿದಾಡುತ್ತಿದ್ದು, ಹಾಗೂ ಇವರನ್ನು ನ್ಯಾಷನಲ್ ಕ್ರಶ್ ಎಂದು ಕರೆಯಲಾರಂಭಿಸಿದ್ದಾರೆ. ನಿನ್ನೆವರೆಗೆ ದೀಪಿಕಾ ಅವರ ಇನ್​ಸ್ಟಾಗ್ರಾಂನಲ್ಲಿ ಕೇವಲ 4 ಸಾವಿರದಷ್ಟು ಫಾಲೋವರ್ಸ್​​ಗಳಿದ್ದರು. ಆದರೆ ಇಂದು ಬೆಳಕು ಹರಿಯುವ ಹೊತ್ತಿಗೆ ಇವರನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ. ಅಲ್ಲದೆ ದೀಪಿಕಾ ಅಭಿಮಾನಿಗಳ ಬಳಗ ಕೂಡ ಹುಟ್ಟುಕೊಂಡಿದೆ.