ಕ್ಯಾಪ್ಟನ್​ ಕೂಲ್​ ಪುತ್ರಿಯ ಚಪಾತಿ ಮೇಕಿಂಗ್​​!!

Viral Video: MS Dhoni's daughter Ziva's 'chapati making.

ಆಗಾಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗೋ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮಗಳು ಜೀವಾಳ ತುಂಟಾದ ವಿಡಿಯೋ ಧೋನಿ ಫ್ಯಾನ್ಸ್​​ಗಳಿಗೆ ಫೇವರಿಟ್​. ಈ ಹಿಂದೆ ಕ್ರೀಡಾಂಗಣದಲ್ಲಿ ಪ್ರ್ಯಾಕ್ಟಿಸ್​ ಮಾಡುತ್ತಿದ್ದ ಧೋನಿಗೆ ವಾಟರ್ ಬಾಟಲ್​​ ತಂದುಕೊಟ್ಟಿದ್ದ ಜೀವಾ ವಿಡಿಯೋ ಸಖತ್​ ಸಂಚಲನ ಮೂಡಿಸಿತ್ತು. ಇದೀಗ ಪುಟ್ಟ ಕಂದ ಜೀವಾ ತನ್ನ ತಂದೆಗಾಗಿ ಶೆಫ್​ ಆಗಿ ಬದಲಾಗಿದ್ದು, ವಿಡಿಯೋ ಸಖತ್ ಶೇರ್ ಆಗ್ತಿದೆ.

Viral Video: MS Dhoni's daughter Ziva's 'chapati making.
Viral Video: MS Dhoni’s daughter Ziva’s ‘chapati making.

ವಿಶ್ರಾಂತಿಯಲ್ಲಿರುವ ಧೋನಿಗಾಗಿ ಅವರ ಪುತ್ರಿ ಜೀವಾ ಗುಂಡಗಿನ ಚಪಾತಿ ಮಾಡ್ತಿರೋ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡ್ತಿದೆ. ಬಿಳಿ ಮತ್ತು ಪಿಂಕ್​ ಬಣ್ಣದ ಹೂವುಗಳ ಪ್ರಾಕ್​ ತೊಟ್ಟ ಜೀವಾ ಪುಟ್ಟದಾದ ಚಪಾತಿಯೊಂದನ್ನು ಲಟ್ಟಣಿಗೆ ಬಳಸಿ ಸಿದ್ದಪಡಿಸುತ್ತಿರುವುದನ್ನು ವಿಡಿಯೋ ಮಾಡಿ ಹರಿಬಿಡಲಾಗಿದೆ. ಧೋನಿ ಫ್ಯಾನ್ಸ್​ ಈ ವಿಡಿಯೋವನ್ನು ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದು, ಲಕ್ಷಾಂತರ ಜನರ ಮೆಚ್ಚುಗೆ ಪಡೆದಿದೆ.

Viral Video: MS Dhoni's daughter Ziva's 'chapati making.
Viral Video: MS Dhoni’s daughter Ziva’s ‘chapati making.

ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿಯಾಗಿದ್ದ ಧೋನಿ ಮಗಳು ಈಗ ಅಪ್ಪನಿಗಿಂತ ಬ್ಯುಸಿ ಆಗಿಬಿಟ್ಟಿದ್ದಾಳೆ. ಇತ್ತೀಚೆಗಷ್ಟೇ ಮರಾಠಿ ಹಾಡೊಂದನ್ನು ಝಿವಾ ಹಾಡುತ್ತಿರುವ ವೀಡಿಯೋ ಒಂದು ಸಾಕಷ್ಟು ಜನರ ಮೆಚ್ಚುಗೆಯನ್ನು ಗಳಿಸಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪುಟ್ಟ ಪೋರಿ ಈಗ ಚಪಾತಿ ಮಾಡುವುದಕ್ಕೆ ತಯಾರಾಗಿಬಿಟ್ಟಿದ್ದಾಳೆ.