ಜಹೀರ್ ಮ್ಯಾರೇಜ್ ಪಾರ್ಟಿಲಿ ಕೊಹ್ಲಿ-ಅನುಷ್ಕಾ ಸಖತ್ ಡ್ಯಾನ್ಸ್!!

Mumbai: Virat Kohli, Anushka Sharma Dance at Zaheer's Reception.
Mumbai: Virat Kohli, Anushka Sharma Dance at Zaheer's Reception.

ಇತ್ತೀಚಿಗಷ್ಟೆ ಮಾಜಿ ಕ್ರಿಕೆಟಿಗ ಜಹೀರ್​​ ಖಾನ್​​ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಬಹುಕಾಲದ ಗೆಳತಿ ಸಾಗರಿಕಾ ಘಾಟ್ಗೆ ಜೊತೆ ಸಪ್ತಪದಿ ತುಳಿದಿದ್ದಾರೆ. ಅತ್ಯಂತ ಸರಳವಾಗಿ  ಜಹೀರ್ ಮತ್ತು ಸಾಗರಿಕಾ ಕೋರ್ಟ್​ ಮ್ಯಾರೇಜ್​ ಮಾಡಿಕೊಂಡಿದ್ದರು. ಮದುವೆ ಬಳಿಕ ಜಹೀರ್ ಮತ್ತು ಸಾಗರಿಕಾ ಆಪ್ತರಿಗಾಗಿ ಗ್ರ್ಯಾಂಡ್​​ ಮ್ಯಾರೇಜ್ ಪಾರ್ಟಿ ಏರ್ಪಡಿಸಿದ್ದರು. ಈ ಮದ್ವೆ ಪಾರ್ಟೀಲಿ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ತನ್ನ ಪ್ರೇಯಸಿ ಅನುಷ್ಕಾ ಶರ್ಮಾ ಜತೆ ಭರ್ಜರಿ ಸ್ಟೆಪ್​​ ಹಾಕಿದ್ದು, ಕುಣಿದು ಕುಪ್ಪಳಿಸಿದ್ದಾರೆ.

Virat Kohli, Anushka Sharma Dance at Zaheer's Reception.
Virat Kohli, Anushka Sharma Dance at Zaheer’s Reception.

ಮುಂಬೈನ ತಾಜ್​ ಲ್ಯಾಂಡ್ಸ್​ ಎಂಡ್​ ಹೋಟೆಲ್​​ನಲ್ಲಿ ಏರ್ಪಡಿಸಲಾಗಿದ್ದ,  ರೆಸೆಪ್ಷನ್​​ಗೆ ಗ್ರೇ ಬಣ್ಣದ ಸೂಟ್​ ನಲ್ಲಿ ಬಂದಿದ್ದ ವಿರಾಟ್​, ಗ್ರೇ ಮತ್ತು ಸಿಲ್ವರ್​​​ ಕುಸುರಿಯ ಲೆಹೆಂಗಾದಲ್ಲಿ ಬಂದಿದ್ದ ಅನುಷ್ಕಾ ಬಾಲಿವುಡ್​ ಜಬರ್​​ದಸ್ತ್​​ ಹಾಡುಗಳಿಗೆ ಮೈಮರೆತು ಕುಣಿದಿದ್ದು, ಎಲ್ಲರ ಮನಸೆಳೆದಿದ್ದಾರೆ.

Virat Kohli, Anushka Sharma Dance at Zaheer's Reception.
Virat Kohli, Anushka Sharma Dance at Zaheer’s Reception.

ಮೊದ್ಲೇ ಶ್ರೀಲಂಕಾ ವಿರುದ್ಧ ಡಬಲ್​ ಸೆಂಚುರಿ ಭಾರಿಸಿದ್ದ ವಿರಾಟ್​ ಸಂಭ್ರಮಕ್ಕೆ ಪಾರವೇ ಇರ್ಲಿಲ್ಲ. ಜಹೀರ್​​ ಮತ್ತು ಸಾಗರಿಕಾ ಜೋಡಿ ಹಾಗೂ ಇತರ ಗಣ್ಯರ ಜೊತೆ  ಕೊಹ್ಲಿ ಮತ್ತು ಅನುಷ್ಕಾ ಕುಣಿದು ಕುಪ್ಪಳಿಸಿದ್ದು, ಈ ವಿಡಿಯೋ ಕಂಡು ಕೊಹ್ಲಿ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ.