ಶನಿಮುಖಿ ಕೊಲೆಗೆ ಸುಪಾರಿ ಬೇರೆ ಕೇಡು- ಜೈಲಿನಿಂದಲೇ ಬಂತು ರವಿ ಬೆಳಗೆರೆ ಹಾಯ್ ಬೆಂಗಳೂರು

ಸಹೋದ್ಯೋಗಿ ಹತ್ಯೆಗೆ ಸುಫಾರಿ ನೀಡಿದ ಆರೋಪದಡಿ ಜೈಲು ಸೇರಿರುವ ಪತ್ರಕರ್ತ ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಅವರ ಪತ್ರಿಕೆ ಹಾಯ್​ ಬೆಂಗಳೂರು ನಿಗದಿತ ಸಮಯಕ್ಕೆ ಬಿಡುಗಡೆಯಾಗಿದೆ. ರವಿ ಬೆಳಗೆರೆ ಜೈಲಿನಲ್ಲಿರುವಾಗಲೇ ಪತ್ರಿಕೆ ಮಾರುಕಟ್ಟೆಗೆ ಬಂದಿರೋದರಿಂದ ಸಾಕಷ್ಟು ಕುತೂಹಲ ಮೂಡಿಸಿದ್ದು, ಪತ್ರಿಕೆ ಜನರ ಕೈಸೇರಿದೆ.

ನೀರಿಕ್ಷಿತ ಎಂಬಂತೆ ರವಿ ಬೆಳಗೆರೆ ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು ಎಂಬ ತಲೆಬರಹದಡಿ ವರದಿ ಪ್ರಕಟಿಸಿದ್ದು, ನೋಟ್ಸ್​ ಫ್ರಮ್​ ಸೆಂಟ್ರಲ್​​ ಜೈಲ್​ ಎಂದು ಬರೆದುಕೊಂಡಿದ್ದಾರೆ. ಸುನಿಲ್​ ಹೆಗ್ಗರವಳ್ಳಿ ವಿಚಾರದಲ್ಲಿ ನನ್ನ ಮೇಲಿನ ಆರೋಪ ಬರೀ ಸುಳ್ಳು. ಇದು 4-5 ಮಂದಿ ಹೆಣೆದ ಜಾಲ. 30 ಲಕ್ಷಕ್ಕೆ ಸುಪಾರಿ ಕೊಟ್ಟು 15 ಸಾವಿರ ಅಡ್ವಾನ್ಸ್​ ಕೊಟ್ಟಿದ್ನಂತೆ. ವಾಟ್​ ಎ ಸ್ಟುಪಿಡ್​ ಟಾಕ್​ ಎಂದು ಬರೆದುಕೊಂಡಿರುವ ರವಿ, ಇದು ಒಬ್ಬ ಸುಪಾರಿ ಹಂತಕ ಹಾಗೂ ಪೊಲೀಸ್ ಅಧಿಕಾರಿ ಸೇರಿ ನಡೆಸಿರುವ ಸಂಚು ಎಂದಿದ್ದಾರೆ.ಮನೆ, ಕಚೇರಿ ಮೇಲಿನ ರೇಡ್​ ಬಗ್ಗೆಯೂ ಬೆಳಗೆರೆ ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದು, ಮನೆಯ ಒಂದು ಮೂಲೆ ಬಿಡದೇ ಸರ್ಚ್​ ಮಾಡಿದ್ರು. ನನ್ನ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿದ್ದು ಸಿಗರೇಟ್​ ತುಂಡು ಮಾತ್ರ. ಮೈ ರೀಡರ್ಸ್​​ ಈ ವೇಳೆಗೆ ನಾನು ಬಂಧಮುಕ್ತನಾಗಿದ್ದೇನೆ. ನಾನು ಕಚೇರಿಯಲ್ಲಿ ತುಂಬಾ ಬರೆದು ನಿದ್ರೆಯಲ್ಲಿದ್ದೆ. ಪೊಲೀಸ್​ ಅಧಿಕಾರಿಯೊಬ್ರು ಬಂದು ನಿಮ್ಮನ್ನ ಅರೆಸ್ಟ್​ ಮಾಡ್ತೀವಿ ಅಂದ್ರು ಎಂದು ಬಂಧನದ ವಿವರ ನೀಡಿದ್ದಾರೆ.

ಅಲ್ಲದೇ, ದುನಿಯಾ ವಿಜಿ ಬಗ್ಗೆಯೂ ಉಲ್ಲೇಖಿಸಿರುವ ರವಿ, ನಟ ದುನಿಯಾ ವಿಜಯ್​ ಸತ್ಯವನ್ನ ಎತ್ತಿ ಹಿಡಿದಿದ್ದಾರೆ. ತಮ್ಮ ಕುಟುಂಬವನ್ನು ಕೊಂಡಾಡಿರುವ ರವಿ ಬೆಳಗೆರೆ, ತಾಯಿ ಹೃದಯದ ಲಲಿತೆ, ಚಂದನೆಯ ಮಕ್ಕಳು, ಮುದ್ದಿನ ಸೊಸೆ.ಯಶೋಮತಿ, ತುಂಟ ಹಿಮವಂತ, ತುಂಬ ಪ್ರೀತಿಸುವ ಸ್ಟಾಫ್,ಇದಕ್ಕಿಂತ ಇನ್ನೇನು ಬೇಕು ಎಂದಿರುವ ರವಿ ನನ್ನೊಂದಿಗೆ ಕೆಲ್ಸ ಮಾಡಿದ್ದ ಹುಡುಗನನ್ನ ಕೊಂದು ಹಾಕಲು ಸುಪಾರಿ ಕೊಡುತ್ತೇನಾ? ಸಿಟ್ಟು ಬಂದರೆ ರೇಗುತ್ತೇನೆ ಎಂದಿದ್ದು, ಪತ್ರಿಕೆ ಬರಹ ಸಾಕಷ್ಟು ಚರ್ಚೆಗೆ ವೇದಿಕೆ ಕಲ್ಪಿಸಿದೆ.