ಮತಯಾಚನೆ ನಡುವೆ ಕ್ರಿಕೇಟ್​ ಆಡಿದ ಕೃಷ್ಣಭೈರೇಗೌಡರು! ಸಾಥ್ ನೀಡಿದ ಎಮ್​ಎಲ್​ಎ ಭೈರತಿ ಸುರೇಶ್​ !!

ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ದಿನಗಣನೆ ನಡೆದಿದೆ. ಹೀಗಾಗಿ ಮೊದಲ ಹಂತದ ಚುನಾವಣೆ ನಡೆಯುವ  ಕ್ಷೇತ್ರಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದಾರೆ. ಆದರೇ ಈ ಪ್ರಚಾರದ ಜಿದ್ದಾಜಿದ್ದಿ ನಡುವೆಯೂ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕೃಷ್ಣಭೈರೆಗೌಡರು ಕ್ರಿಕೇಟ್ ಆಡಿ ರಿಲ್ಯಾಕ್ಸ್​ ಆಗಿದ್ದಾರೆ.

ad

ಹೌದು ಬೆಂಗಳೂರು ಉತ್ತರದಲ್ಲಿ ಕೃಷ್ಣ ಭೈರೇಗೌಡ್ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನಡುವೆ ನೇರ ಫೈಟಿಂಗ್ ಇದೆ. ಹೀಗಾಗಿ  ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಇಂದು ಮುಂಜಾನೆಯೇ ಬಿರುಸಿನ ಮತಯಾಚನೆ ನಡೆಸಿದ್ದಾರೆ.


ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಹೆಬ್ಬಾಳದ ವೆಟರ್ನರಿ ಕಾಲೇಜು ಕ್ಯಾಂಪಸ್​​ನಲ್ಲಿ ಬಿರುಸಿನ ಮತಯಾಚನೆ ನಡೆಸಿದರು. ಈ ವೇಳೆ ಕೃಷ್ಣಭೈರೇಗೌಡರ ಮತ ಪ್ರಚಾರಕ್ಕೆ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ಇನ್ನು ಇದೇ ವೇಳೆ ಮತಬೇಟೆ ವೇಳೆ ಕೃಷ್ಣಭೈರೇಗೌಡರು ಬ್ಯಾಟ್​ ಹಿಡಿದು ಕ್ರಿಕೆಟ್ ಆಡಿದರೇ ಎಂಎಲ್​ಎ ಭೈರತಿ ಸುರೇಶ್ ಕೀಪಿಂಗ್ ಮಾಡೋ ಮೂಲಕ ಗಮನ ಸೆಳೆದರು.