ಕಾಳಿಂಗ ಸರ್ಪ ಹೆಡೆ ಎತ್ತಿದ್ರೆ ಹೇಗಿರುತ್ತೆ ಗೊತ್ತಾ ? ಹರೀಂದ್ರರಿಗೆ ಸೆರೆಯಾದ ಚಿಕ್ಕಮಗಳೂರಿನ ಕಿಂಗ್ ಕೋಬ್ರಾ !!

15 feet long King Cobra Found in Chikmagalur.
15 feet long King Cobra Found in Chikmagalur.

ಮೈ ರೋಮಾಂಚನಗೊಳ್ಳುವಂತೆ ಉರಗ ತಜ್ಞರೊಬ್ಬರು ಸೆರೆ ಹಿಡಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಮಡಬೂರಿನಲ್ಲಿ ನಡೆದಿದೆ.

ಮಡಬೂರಿನ ಉದಯ್ ಪೂಜಾರಿ ಎಂಬುವರ ತೋಟದಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಕಂಡು ಭಯಬೀತರಾದ ಉದಯ್ ಪೂಜಾರಿ ಕುಟುಂಬಸ್ಥರು ಕೂಡಲೇ ಉರಗ ತಜ್ಞ ಹರೀಂದ್ರ ಗೆ ವಿಷಯ ತಿಳಿಸಿದ್ದಾರೆ. ತಕ್ಷಣ ತೋಟಕ್ಕೆ ಆಗಮಿಸಿದ ಉರಗ ತಜ್ಞ ತಮ್ಮ ಜೀವ ಭಯಬಿಟ್ಟು ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಕಳೆದ ಎರಡು ದಿನದ ಹಿಂದೆ ಕೂಡ ಕೊಪ್ಪ ತಾಲೂಕಿನ ಗಡಿಗೇರಶ್ವರ ಗ್ರಾಮದ ಪೈಪ್ ನಲ್ಲಿ ಸಿಲುಕಿದ್ದ ಕಾಳಿಂಗ ಸರ್ಪವನ್ನು ಕೂಡು ಉರಗ ತಜ್ಞ ಹರೀಂದ್ರ ರಕ್ಷಣೆ ಮಾಡಿದ್ರು.

ಇನ್ನು ಕೊಪ್ಪ ತಾಲೂಕಿನ ಉತ್ತಮೇಶ್ವರ ಗ್ರಾಮದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ವೇಳೆಯಲ್ಲೂ ಕೂಡು ಉರಗ ತಜ್ಞ ರು ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ರು. ಇನ್ನು ಸೆರೆ ಹಿಡಿದ ಮೂರು ಕಾಳಿಂಗ ಸರ್ಪವನ್ನ ಉರಗ ತಜ್ಞ ಹರಿಂದ್ರರವರು ಕಾಡಿಗೆ ಬಿಟ್ಟಿದ್ದಾರೆ….