ಐಟಿ ದಾಳಿ 2.17 ಕೋಟಿ ವಶಕ್ಕೆ- ಮೊಳಕಾಲ್ಮೂರಿನಲ್ಲಿ ಹಂಚಲು ತರಲಾಗಿತ್ತು ಎಂಬ ಶಂಕೆ!

ಚಿತ್ರದುರ್ಗದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಸ್ಕಾರ್ಪಿಯೋ ವಾಹನದಲ್ಲಿ ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ ಒಟ್ಟು 2.17 ಕೋಟಿ ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ. ಮೊಳಕಾಲ್ಮೂರು ತಾಲೂಕಿನ ಮೇಗಳಹಳ್ಳಿಯಲ್ಲಿ ಹಣ ಪತ್ತೆಯಾಗಿದೆ.

ಬಳ್ಳಾರಿ ಮೂಲದ ಸ್ಕಾರ್ಪಿಯೋ ವಾಹನದಲ್ಲಿ ಹಣ ಸಾಗಿಸಲಾಗುತ್ತಿತ್ತು. ಇನ್ನು ದಾಳಿ KA-34,M-9617 ವಾಹನ ಚಲಾಯಿಸುತ್ತಿದ್ದ ಚಾಲಕ ಉಮಾಮಹೇಶ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆದಿದೆ. ದಾಳಿ ವೇಳೆಯೇ ಸೂಕ್ತ ದಾಖಲೆ ಇಲ್ಲದೇ 2.17 ಕೋಟಿ ಪತ್ತೆಯಾಗಿದೆ. ಈ ಹಣವನ್ನು ಚುನಾವಣೆ ವೇಳೆ ಮತದಾರರನ್ನು ಸೆಳೆಯಲು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ.