ಪುತ್ತೂರಿನಲ್ಲಿ ಮಣ್ಣು ಕುಸಿದು ಇಬ್ಬರು ಸಾವನ್ನಪ್ಪಿದರು. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ!!

ನಿರ್ಮಾಣ ಹಂತದ ಕಟ್ಟಡದ ಬಳಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.  ಪುತ್ತೂರು ನೆಲ್ಲಿಕಟ್ಟೆ ಎಂಬಲ್ಲಿ ಈ ಘಟನೆ  ನಡೆದಿದ್ದು ಇದ್ರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಸ್ಥಳದಲ್ಲಿ ಎಂಟು ಕಾರ್ಮಿಕರು ಕೆಲಸ ಮಾಡ್ತಿದ್ರು. ಈ ವೇಳೆ ದಿಢೀರನೆ ಭಾರೀ ಪ್ರಮಾಣದ ಮಣ್ಣು ಕುಸಿದಿದೆ. ಪರಿಣಾಮ ಮಣ್ಣಡಿಯಲ್ಲಿ‌  ಕಾರ್ಮಿಕರು ಸಿಕ್ಕಾಕೊಂಡಿದ್ದಾರೆ. ಈ ಪೈಕಿ ಇಬ್ಬರು ಉಸಿರುಕಟ್ಟಿ ಮೃತಪಟ್ಟಿದ್ದಾರೆ.

ಮೃತಪಟ್ಟರನ್ನು ಪದ್ಮನಾಭ (35) ಹಾಗೂ ಕೊಪ್ಪಳದ ಶಿವಣ್ಣ ( 40) ವರ್ಷ ಎಂದು ಗುರುತಿಸಲಾಗಿದೆ. ಇನ್ನು ಮಹಾಂತೇಶ್ ಹಾಗೂ ಯಶವಂತ್ ಎಂಬಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯ ಕುರಿತಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.