200 crores Worth Land mafia from Govt officers | ಇದು 200 ಕೋಟಿ ಮೌಲ್ಯದ ಭೂಕಾಸುರರ ಡೀಲ್​​ ಭ್ರಷ್ಟ ಅಧಿಕಾರಿಗಳ ಅಕ್ರಮದಿಂದ ಭೂಮಿ ಬಿಲ್ಡರ್​​ಗಳ ಪಾಲು

0
6

ಇದು 200 ಕೋಟಿ ಮೌಲ್ಯದ ಭೂಕಾಸುರರ ಡೀಲ್​​
ಭ್ರಷ್ಟ ಅಧಿಕಾರಿಗಳ ಅಕ್ರಮದಿಂದ ಭೂಮಿ ಬಿಲ್ಡರ್​​ಗಳ ಪಾಲು
ಕೆಎಂಎಫ್​​ಗೆ ನೀಡಿದ್ದ ಭೂಮಿಯನ್ನೇ ನುಂಗಿದ ಪ್ರಭಾವಿಗಳು
ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿದ್ದ ಬೆಲೆ ಬಾಳುವ ಭೂಮಿ
ಕೆಎಂಎಫ್​​ಗೆ ಸೇರಿದ ಭೂಮಿ ನುಂಗಾಟದ ಡೀಲ್​ ನಡೆದಿದ್ದು ಹೇಗೆ?
ಬಿಟಿವಿ ಬಳಿ ಇದೆ ಅಕ್ರಮದ ಎಕ್ಸ್​ಕ್ಲೂಸೀವ್​​ ಡೀಟೇಲ್ಸ್​

ಭೂಕಾಸುರರ ಬೃಹತ್​​ ಡೀಲ್​​
=============
222

ಬಿಲ್ಡರ್​ಗಳ ಪಾಲಾಗಿದೆ ಕೆಎಂಎಫ್​ಗೆ ಸರ್ಕಾರ ನೀಡಿದ್ದ ಭೂಮಿ
ಕೋರಮಂಗಲ ಬಳಿ ಕೆಎಂಎಫ್​ಗೆ 4 ಎಕರೆ 14 ಗುಂಟೆ ಮಂಜೂರು
ಅಂದಿನ ಪಶು ಸಂಗೋಪನೆ ಸಚಿವರಿಂದ ಭೂಮಿ ಮಂಜೂರು
ಕ್ಯಾಬಿನೆಟ್ ಅನುಮೋದನೆ ಪಡೆಯದೇ ಭೂಮಿ ನೀಡಿದ್ದ ಸರ್ಕಾರ
2008ರಲ್ಲಿ ಅಕ್ರಮ ಸೇಲ್​ ಡೀಡ್ ಮೂಲಕ ಕೆಎಂಎಫ್​ಗೆ ರಿಜಿಸ್ಟ್ರೇಷನ್
ಭೂಮಿ ಅಲಾಟ್ ಆದ ಹತ್ತೇ ದಿನದಲ್ಲಿ ಕೆಎಂಎಫ್​​ ಅಧಿಕಾರಿಗಳ ಆಟ
ಪಿವಿಕೆ ಇನ್​ಫ್ರಾಸ್ಟ್ರಕ್ಚರ್​ ಜತೆ ಕೆಎಂಎಫ್​ ನಿಂದ ಅಕ್ರಮ ಜಾಯಿಂಟ್​ ವೆಂಚರ್
ಪಿವಿಕೆ ಇನ್​​ಫ್ರಾಸ್ಟ್ರಕ್ಚರ್​​ ಮತ್ತೆ ಏಳು ಕಂಪನಿಗಳ ಜತೆ ಜಾಯಿಂಟ್ ವೆಂಚರ್
ಸಾಲು ಸಾಲು ಅಕ್ರಮ ಜಾಯಿಂಟ್ ವೆಂಚರ್ ಮಾಡಿಕೊಂಡಿದ್ದ ಪಿವಿಕೆ
HASCO, ಹಿಂದೂಸ್ತಾನ್ ಇನ್ಪಾಸ್ಟಕ್ಚರ್, ಮಂತ್ರಿ ಹೆಬಿಟೇಟ್ ಜೊತೆ ಒಡಂಬಡಿಕೆ
ಇದರಲ್ಲಿ ಎರಡು ಕಂಪನಿಗಳಿಗೆ ಮಾಲೀಕರಾಗಿರುವ ಪ್ರಭಾವಿ ರಾಜಕಾರಣಿ
ಕೆಎಂಎಫ್​ಗೆ ಸೇರಿದ ಭೂಮಿ ನುಂಗಲು ಬಿಲ್ಡರ್, ರಾಜಕಾರಣಿ ತಂತ್ರ
ಕೂಡಲೇ ಸರ್ಕಾರ ಎಚ್ಚೆತ್ತು ಇಡೀ ಪ್ರಕರಣದ ಎಸಿಬಿ ತನಿಖೆ ನಡೆಸಲಿ
ಕೂಡಲೇ ಸಿಎಂ ಇತ್ತ ಗಮನ ಹರಿಸಿ ಅಕ್ರಮ ಒಡಂಬಡಿಕೆ ರದ್ದು ಮಾಡಲಿ
ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿ

ಬರೋಬ್ಬರಿ 200 ಕೋಟಿಗೂ ಹೆಚ್ಚು ಬೆಲೆ ಬಾಳೋ ಸರ್ಕಾರಿ ಭೂಮಿ ಕೆಎಮ್ ಎಫ್ ನ ಭ್ರಷ್ಟ ಅಧಿಕಾರಿಗಳ ಅಕ್ರಮ ಒಡಂಬಡಿಕೆಯಿಂದ ಬಿಲ್ಡರ್ ಗಳ ಪಾಲಾಗುತ್ತಿದೆ.1984ರಲ್ಲಿ ಕೆಎಮ್ ಎಫ್ ಗೆ ಸ್ವಂತ ಕಟ್ಟಡವಿಲ್ಲದ ಕಾರಣ ಎಮ್ .ಜಿ.ರಸ್ತೆಯಲ್ಲಿ 46 ಸಾವಿರದ 281 ರೂಪಾಯಿ ನೀಡಿ ಬಾಡಿಗೆ ಕಟ್ಟಡದಲ್ಲಿರೋದ್ರಿಂದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕೋರಮಂಗಲದಲ್ಲಿ ಜಮೀನು ನೀಡುವಂತೆ ಅಂದಿನ ಕೆಎಮ್ ಎಫ್ ಅಧ್ಯಕ್ಷ ಕೆ.ಬಿ.ಮಲ್ಲಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದರು.ಅದರಂತೆ ಅಂದಿನ ಪಶುಸಂಗೋಪನೆ ಸಚಿವ ಹೆಚ್.ಎ.ನಾರಾಯಣಗೌಡ ಕೋರಮಂಗಲದಲ್ಲಿ ಕೆಎಮ್ ಎಫ್ ಗೆ 4 ಎಕರೆ 14 ಗುಂಟೆ ಭೂಮಿಯನ್ನು ನೀಡುತ್ತಾರೆ. 1998 ರಲ್ಲಿ ಸರ್ಕಾರದಿಂದ ಜಾಗ ಮಂಜೂರಾಗುತ್ತದೆ. ಆದ್ರೆ ಸಂಬಂಧಪಟ್ಟ ಜಾಗ ಲೋಕೋಪಯೋಗಿ ಇಲಾಖೆಗೆ ಸೇರಿದ ಭೂಮಿಯಾಗಿರೋದ್ರಿಂದ ಕ್ಯಾಬಿನೆಟ್ ಅನುಮೋದನೆ ಪಡೆಯಬೇಕಿತ್ತು.ಆದ್ರೆ ಯಾವುದೇ ಅನುಮೋದನೆ ಇಲ್ಲದೇ ಅಕ್ರಮವಾಗಿ ಲೋಕೋಪಯೋಗಿ ಇಲಾಖೆ ಕೆಎಮ್ ಎಫ್ ಗೆ ಅಕ್ರಮ ಸೇಲ್ ಡೀಡ್ ಮಾಡಿಕೊಟ್ಟು ಮೇ 19, 2008ಕ್ಕೆ ಜಾಗ ರಿಜಿಸ್ಟ್ರೇಷನ್ ಮಾಡಿಸಿಕೊಡುತ್ತದೆ.ಹೀಗೆ ಅಲಾಟ್ ಆದ ಭೂಮಿಯನ್ನು ಮೇ 29,2009 ರಂದು ಕೇವಲ ಹತ್ತೇ ದಿನಗಳಲ್ಲಿ ಕೆಎಮ್ ಎಫ್ ನ ಭ್ರಷ್ಟ ಅಧಿಕಾರಿಗಳು PVK ಇನ್ಫ್ರಾಸ್ಟ್ರಕ್ಚರ್ ಎಂಬ ಖಾಸಗಿ ಕಂಪನಿ ಜೊತೆ ಜಾಯಿಂಟ್ ವೆಂಚರ್ ಒಡಂಬಡಿಕೆ ಮಾಡಿಕೊಂಡು ಭೂಮಿಯನ್ನು ನೀಡುತ್ತದೆ. ಜಾಯಿಂಟ್ ವೆಂಚರ್ ಗೆ 7 ಖಾಸಗಿ ಕಂಪನಿಗಳು ಮುಂದೆ ಬಂದ್ರೂ PVK ಇನ್ಫ್ರಾಸ್ಟ್ರಕ್ಚರ್ ಗೆ ಮಾತ್ರ ಕೊಡ್ತಾರೆ.ನಂತ್ರ PVK ಇನ್ಫ್ರಾಸ್ಟ್ರಕ್ಚರ್ ಕಂಪನಿ HASCO ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಳ್ಳುತ್ತದೆ. ನಂತರ ಹಿಂದೂಸ್ತಾನ ಇನ್ಪಾಸ್ಟಕ್ಚರ್​ ಕಂಪನಿ ಜೊತೆಗೂ ಒಡಂಬಡಿಕೆಯಾಗುತ್ತದೆ. ಅಲ್ಲಿಂದ ಪಿವಿಕೆ ಇನ್ಪಾಸ್ಟಕ್ಷರ್​ ಮಂತ್ರಿ ಹೆಬಿಟೇಟ್ ಸಂಸ್ಥೆ ಜೊತೆ ಒಪ್ಪಂದವಾಗುತ್ತದೆ.
ಸುಮಾರು 5 ಕಂಪನಿಗಳ ಜೊತೆ ಮರು ಒಪ್ಪಂದ ಮಾಡಲಾಗಿದ್ದು, ಇದರಲ್ಲಿ ಎರಡು ಕಂಪನಿಗಳ ಮುಖ್ಯಸ್ಥರಾಗಿ ಪ್ರಭಾವಿ ರಾಜಕಾರಣಿಯೊಬ್ಬರು ಇದ್ದಾರೆ ಎನ್ನಲಾಗಿದೆ. ಈ ಜಾಗದಲ್ಲಿ ಇದೀಗ ಬೃಹತ್ ಕಮರ್ಷಿಯಲ್​ ಕಾಂಪ್ಲೆಕ್ಸ್ ಕಟ್ಟಲಾಗಿದೆ. ಕಳೆದ 20 ವರ್ಷದಿಂದ ಕೆಎಂಎಫ್​​ಗೆ ಒಂದೇ ಒಂದು ರೂಪಾಯಿ ಆದಾಯವೂ ಬಂದಿಲ್ಲ. ಅಧಿಕಾರಿಗಳು ಬಿಲ್ಡರ್​ಗಳ ಜೊತೆ ಸೇರಿಕೊಂಡು ಸರ್ಕಾರಿ ಭೂಮಿಯನ್ನು ಖಾಸಗಿಯವರ ಪಾಲಾಗಿಸಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಇತ್ತ ಗಮನ ಹರಿಸಬೇಕು. ಈ ಅಕ್ರಮ ಒಡಂಬಡಿಕೆ ರದ್ದು ಮಾಡಬೇಕು. ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಎಸಿಬಿ ತನಿಖೆ ನಡೆಸಿ ಪ್ರಭಾವಿ ರಾಜಕಾರಣಿ ಹೆಸರನ್ನು ಬಹಿರಂಗ ಪಡಿಸಬೇಕು.