ಕರ್ನಾಟಕಕ್ಕೆ ಏನೂ ನೀಡದ ಮೋದಿ ಬಜೆಟ್ !! ಸಬರ್ಬನ್ ರೈಲಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಿರೋ ಕನ್ನಡಿಗ !!

ಪ್ರಧಾನಿ ನರೇಂದ್ರ ಮೋದಿ ಸರಕಾರದ ಕೇಂದ್ರ ಬಜೆಟ್ ಬಗ್ಗೆ ಕರ್ನಾಟಕ ಭಾರೀ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ ಅದೆಲ್ಲವೂ ಹುಸಿಯಾಗಿದೆ.

ಕರ್ನಾಟಕದಲ್ಲಿ ಈ ವರ್ಷ ಚುನಾವಣೆ ಇರುವುದರಿಂದ ಕನ್ನಡಿಗರನ್ನು ಬಿಜೆಪಿಯತ್ತಾ ಆಕರ್ಷಿಸಲು ಹಲವು ಯೋಜನೆಗಳನ್ನು ನೀಡುತ್ತಾರೆ ಎಂದು ಭಾವಿಸಲಾಗಿತ್ತು.ಆದರೆ ಬಜೆಟ್ ನಲ್ಲಿ ಕರ್ನಾಟಕವನ್ನು ಗಣನೆಗೇ ತೆಗೆದುಕೊಂಡಿಲ್ಲ. ಬಜೆಟ್ ನಲ್ಲಿ ದೇಶದ ಬೇರೆ ಬೇರೆ ರಾಜ್ಯಗಳಿಗೆ ರೈಲು, ಮೂಲಭೂತ ಸೌಕರ್ಯ ಯೋಜನೆಗಳನ್ನು ಘೋಷಿಸಿದ್ದರೆ ರಾಜ್ಯಕ್ಕೆ ಯಾವುದೇ ಘೋಷಣೆಗಳನ್ನು ಮಾಡಲಾಗಿಲ್ಲ. ಮೆಟ್ರೋ ಸಂಪರ್ಕ ಕಲ್ಪಿಸುವ ಸಬರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂಪಾಯಿಗಳನ್ನು ನೀಡಿದ್ದು ಬಿಟ್ಟರೆ ಬೇರಾವುದೇ ಯೋಜನೆಗಳನ್ನು ನೀಡಿಲ್ಲ. ಕರ್ನಾಟಕದ ಬಗೆಗಿನ ಈ ಪರಿಯ ತಾತ್ಸಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here