ಪಕೋಡಾ ಚಳುವಳಿಗೆ ಉತ್ತರ ನೀಡಿದ ಜೇಟ್ಲಿ ಬಜೆಟ್ !! ಉದ್ಯೋಗ, ಅಭಿವೃದ್ದಿಗೆ ಕೋಟಿ ಕೋಟಿ ನೀಡಿದ ಮೋದಿ !!

ಕೇಂದ್ರ ಸರಕಾರ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಠಿ ಮಾಡುತ್ತಿಲ್ಲ ಎಂಬ ಆರೋಪದ ಅಸಂಧರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ನೀಡಿದ ಪಕೋಡಾ ವ್ಯಾಪಾರದ ಉದಾಹರಣೆ ಮೋದಿ ವಿರುದ್ದದ ಪಕೋಡಾ ಚಳುವಳಿಯಾಗಿ ಮಾರ್ಪಾಟಾಗಿತ್ತು.

ಈ ಪಕೋಡ ಚಳುವಳಿಗೆ ಬಜೆಟ್ ನಲ್ಲಿ ಉತ್ತರ ನೀಡಲು ಜೇಟ್ಲಿ ಯತ್ನ ನಡೆಸಿದ್ದಾರೆ. ಈ ವರ್ಷದಲ್ಲಿ 70 ಲಕ್ಷ ಉದ್ಯೋಗಗಳ ಸೃಷ್ಟಿ ಮಾಡಲಾಗುವುದು ಎಂದು ಅರುಣ್ ಜೇಟ್ಲಿ ತನ್ನ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಇಪಿಎಫ್ ಕಾಯ್ದೆಯಲ್ಲಿ ಬದಲಾವಣೆ ಮಾಡಲಾಗಿದೆ. ಸಿ ಪ್ಲೇನ್​ ಉತ್ತೇಜನಕ್ಕಾಗಿ ಪ್ರವಾಸೋದ್ಯಮದಡಿ ವಿಶೇಷ ಕ್ರಮ ಕೈಗೊಳ್ಳಲಾಗುತ್ತದೆ. ಸೋಲಾರ್​ ವ್ಯವಸ್ಥೆ ಒಳಗೊಂಡ ಸ್ಮಾರ್ಟ್​ ರೋಡ್​ಗಳ ನಿರ್ಮಾಣ, 10 ಪ್ರಸಿದ್ಧ ಪ್ರವಾಸಿ ಸ್ಥಳಗಳ ಅಭಿವೃದ್ಧಿ,500 ನಗರಗಳ ಅಭಿವೃದ್ಧಿಗೆ 77,600 ಕೋಟಿ, 2018-19ರಲ್ಲಿ 100 ಹೆಚ್ಚುವರಿ ಸ್ಮಾರ್ಟ್​ ಸಿಟಿಗಳ ನಿರ್ಮಾಣ. ರೈಲ್ವೆಗೆ 1 ಲಕ್ಷದ 48 ಕೋಟಿ ರೂಪಾಯಿ ನಿಗಧಿಗೊಳಿಸಲಾಗಿದೆ. ಜವಳಿ ಕ್ಷೇತ್ರಕ್ಕೆ 7100 ಕೋಟಿ ಅನುದಾನ ನೀಡಿ ಅಭಿವೃದ್ಧಿಗೊಳಿಸಲು ಉತ್ತೇಜನಗೊಳಿಸಲಾಗುವುದು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಜವಳಿ ಕ್ಷೇತ್ರ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.