ಇನ್ನು ಭ್ರಷ್ಟಾಚಾರ ಎನ್ನುವುದು ಶಿಷ್ಠಾಚಾರವಲ್ಲ !! ಪ್ರಗತಿಗೆ ಅಡ್ಡಿಯಾಗಿದ್ದು ಸವಕಲು ನೀತಿಗಳು !! ಬಜೆಟ್ ಭಾಷಣದಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡ ಜೇಟ್ಲಿ !!

2018-19ರ ಬಜೆಟ್ ಮಂಡನೆ ಆರಂಭಿಸಿದ ಅರುಣ್ ಜೇಟ್ಲಿ ಅಕ್ಷರಶಃ ಪ್ರತಿಪಕ್ಷ ಕಾಂಗ್ರೆಸ್ ನ ಬೆವರಿಳಿಸಿದರು. ಬಡತನ ನಿರ್ಮೂಲನೆಗೆ ನಮ್ಮ ಸರ್ಕಾರ ಸಂಕಲ್ಪ ಮಾಡಿತ್ತು. ಆದರೆ ಭ್ರಷ್ಟಾಚಾರ ಮತ್ತು ಸವಕಲು ನೀತಿಗಳು ನಮ್ಮ ಪ್ರಗತಿಗೆ ಪಾರ್ಶ್ವ ವಾಯು ಬಡಿಸಿದ್ದವು ಎಂದು ಅರುಣ್ ಜೇಟ್ಲಿ ಹೇಳುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿದರು.

 ಯುಪಿಎ ಸರಕಾರದ ಭ್ರಷ್ಠಾಚಾರದ ಮತ್ತು ಸವಕಲು ನೀತಿಗಳ ಪರಿಣಾಮವಾಗಿ ನಮಗೆ ಸೂಕ್ತ ವೇಗದಲ್ಲಿ ಅಭಿವೃದ್ದಿಯತ್ತಾ ದಾಪುಗಾಲು ಇಡಲಾಗುತ್ತಿಲ್ಲ ಎಂಬ ಅರ್ಥ ಬರುವಂತೆ ಭ್ರಷ್ಟಾಚಾರ ಮತ್ತು ಸವಕಲು ನೀತಿಗಳು ನಮ್ಮ ಪ್ರಗತಿಗೆ ಪಾರ್ಶ್ವ ವಾಯು ಬಡಿಸಿದ್ದವು ಎಂದು ಅರುಣ್ ಜೇಟ್ಲಿ ಹೇಳಿದರು. ಈ ಮೊದಲು ಭ್ರಷ್ಟಾಚಾರ ಶಿಷ್ಟಾಚಾರವಾಗಿತ್ತು. ಈಗ ಸರ್ಕಾರ ತೆಗೆದುಕೊಂಡ ಸುಧಾರಣೆ ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆಗೆ ಚೇತರಿಕೆ ನೀಡಿದೆ.ಪರೋಕ್ಷ ತೆರಿಗೆಗಳನ್ನ ನಾವು ಬಂದ ಮೇಲೆ ಸರಳೀಕರಿಸಿದ್ದೇವೆ. ತೆರಿಗೆಯ ಡಿಜಿಟಲೀಕರಣ ಆರ್ಥಿಕ ಸುಧಾರಣೆಗೆ ದಾರಿ ಮಾಡಿ ಕೊಟ್ಟಿದೆ. ಭಾರತದ ಆರ್ಥಿಕತೆ ಮೊದಲ 3 ವರ್ಷದಲ್ಲಿ 7.3ರಷ್ಟು ಪ್ರಗತಿ ಕಂಡಿತ್ತು. ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆ ದರ 7.5ಕ್ಕೆ ತಲುಪಿಸಲು ಪ್ರಯತ್ನ ಮಾಡಲಾಗುವುದು. ರಫ್ತು ಕ್ಷೇತ್ರದಲ್ಲಿ ಶೇ.23ರಷ್ಟು ಪ್ರಗತಿಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಭಾರತದ ಕೃಷಿ ಆರ್ಥಿಕತೆಯನ್ನು ಬಲಗೊಳಿಸುವ ಪ್ರಯತ್ನ ನಡೆದಿದೆ. ಪ್ರಧಾನಿ ಮೋದಿ ಉತ್ತಮ ಆಡಳಿತದ ಕನಸು ಕಂಡಿದ್ದಾರೆ. ನಮ್ಮ ಸರ್ಕಾರ ಹಲವು ಸುಧಾರಣೆ ಮತ್ತು ಪರಿವರ್ತನೆಗಳನ್ನು ತಂದಿದೆ ಎಂದು ಜೇಟ್ಲಿ ತನ್ನ ಭಾಷಣದ ಆರಂಭದಲ್ಲಿ ಹೇಳಿದರು.

ವ್ಯವಹಾರದ ಶ್ರೇಯಾಂಕದಲ್ಲಿ ಭಾರತ ಜಾಗತಿಕ ಱಂಕ್​ನಲ್ಲಿ 100ನೇ ಸ್ಥಾನಕ್ಕೆ ಬಂದಿದೆ. ಉಜ್ವಲ ಯೋಜನೆಯಡಿ ಕೋಟ್ಯಂತರ ಜನರಿಗೆ ಉಚಿತ ಗ್ಯಾಸ್ ನೀಡುತ್ತಿದ್ದೇವೆ. 3 ಸಾವಿರ ಜನೌಷಧಿ ಕೇಂದ್ರಗಳಲ್ಲಿ 8 ಸಾವಿರ ಔಷಧಿಗಳನ್ನು ಕಡಿಮೆ ದರದಲ್ಲಿ ನೀಡುತ್ತಿದ್ದೇವೆ. ಪಾಸ್​​ಪೋರ್ಟ್​ ಮತ್ತಿತ್ತರೆ ದಾಖಲೆಗಳ ಪ್ರಕ್ರಿಯೆ ಸರಳೀಕರಣಗೊಂಡಿದೆ. ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿಸಲು ಸರ್ವ ಪ್ರಯತ್ನ ನಡೆದಿದೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ನಮ್ಮ ಸರ್ಕಾರದ ಆದ್ಯತೆ. 2022ರ ವೇಳೆಗೆ ಭಾರತದ ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ. ಬೆಳೆ ಉತ್ಪತ್ತಿ ಪ್ರಮಾಣ ಹೆಚ್ಚಳ ಮತ್ತು ವೈಜ್ಞಾನಿಕ ದರ ನಿಗದಿಗೆ ಆದ್ಯತೆ ನೀಡಲಾಗುತ್ತದೆ. ಭಾರತದ ಕೃಷಿ ಉತ್ಪಾದನೆ ಇಂದು ದಾಖಲೆ ಮಟ್ಟದಲ್ಲಿದೆ. ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ನಾವು ದಾಖಲೆ ಬರೆದಿದ್ದೇವೆ. ಎಲೆಕ್ಟ್ರಾನಿಕ್ ಮಾರುಕಟ್ಟೆಗಳ ಮೂಲಕ ರೈತನಿಗೆ ಲಾಭ ಸಿಗುತ್ತಿದೆ ಎಂದು ಜೇಟ್ಲಿ ತನ್ನ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.