ಆಹಾರದಿಂದ ಔಷದಿಯವರೆಗೆ ಬಜೆಟ್ ನಲ್ಲಿ ಪ್ರಾಮುಖ್ಯತೆ !! ವಾಯು ಮಾಲಿನ್ಯ ನಿಯಂತ್ರಣ, ಸ್ವಚ್ಚ ಭಾರತ, ಗ್ರಾಮೀಣ ಭಾರತಕ್ಕೆ ಪ್ರಾದಾನ್ಯತೆ !!

ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಗ್ರಾಮೀಣ ಭಾರತದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಆಹಾರ, ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆರೋಗ್ಯ ಮತ್ತು ಆಹಾರ ಕ್ಷೇತ್ರದಲ್ಲಿ ಗ್ರಾಂತಿಕಾರಕ ಹೆಜ್ಜೆ ಇಟ್ಟಿದ್ದೇವೆ ಎಂದು ಬಜೆಟ್ ಮಂಡನೆ ಬಳಿಕ ಪ್ರಧಾನಿ ಮೋದಿ ಹೇಳಿದ್ದಾರೆ.

 ಔಷಧೀಯ ಸಸ್ಯಗಳ ತೋಟಗಾರಿಕೆಗೆ 200 ಕೋಟಿ ರೂಪಾಯಿಗಳ ಅನುದಾನ, ಆಹಾರ ಸಂಸ್ಕರಣೆ ವಲಯಕ್ಕೆ 500 ಕೋ.ರೂ. ಅನುದಾನ, ಕೃಷಿ ಉತ್ಪನ್ನಗಳ ರಫ್ತಿಗೆ ಇನ್ನಷ್ಟು ಸರಳ ಅವಕಾಶ, ಅರಣ್ಯ ಪ್ರದೇಶದಿಂದ ಹೊರಗೆ ಬಿದಿರು ಬೆಳೆ ಉತ್ತೇಜಿಸಲು ನೆರವು, ಮೈಕ್ರೋ ನೀರಾವರಿ ನಿಧಿ ಜೊತೆಗೆ ಮೀನುಗಾರಿಕೆಗೂ ವಿಶೇಷ ನಿಧಿ, ಪಶು ಸಂಗೋಪನೆ, ಮೀನುಗಾರಿಕೆ ನಿಧಿಗೆ 10 ಸಾವಿರ ಕೋಟಿ ನಿಗದಿ,ಎಪಿಎಂಸಿ ಮಂಡಿಗಳಿಗೆ 2 ಸಾವಿರ ಕೋಟಿ, ಆಹಾರ ಸಂಸ್ಕರಣೆಗೆ 1 ಸಾವಿರ ಕೋಟಿ ರೂಪಾಯಿಗನ್ನು ನೀಡಲಾಗಿದೆ.

ಇತ್ತಿಚ್ಚೆಗೆ ಭಾರೀ ಆತಂಕ ಮೂಡಿಸಿರುವ ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಯೋಜನೆ, ಎಸ್​ಸಿ, ಎಸ್​ಟಿ ಮತ್ತು ದುರ್ಬಲ ವರ್ಗಗಳ ಪ್ರಗತಿಗೆ ವಿಶೇಷ ಗಮನ, ಬಡವರು, ಮಧ್ಯಮವರ್ಗಕ್ಕೆ ಬಜೆಟ್​​ನ ಹೆಚ್ಚುವರಿ ಲಾಭ, 8 ಕೋಟಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್​,4 ಕೋಟಿ ಮನೆಗಳಿಗೆ ಯಾವುದೇ ಶುಲ್ಕವಿಲ್ಲದೆ ವಿದ್ಯುತ್ ಸಂಪರ್ಕ, ಕೃಷಿ ಸಾಲಕ್ಕೆ 11 ಲಕ್ಷ ಕೋಟಿ ಮೀಸಲು, ಸ್ವಚ್ಛ ಭಾರತದಡಿ 6 ಕೋಟಿ ಶೌಚಾಲಯ ನಿರ್ಮಾಣವಾಗಿದೆ. ಉಳಿದ 1 ವರ್ಷದಲ್ಲಿ 2 ಕೋಟಿ ಶೌಚಾಲಯಗಳ ನಿರ್ಮಾಣ ಗುರಿ ಹೊಂದಿದೆ ಎಂದು ಜೇಟ್ಲಿ ಹೇಳಿದ್ದಾರೆ.

2022ರ ಒಳಗೆ ಪ್ರತಿ ಬಡವರಿಗೂ ಸೂರು ಕಲ್ಪಿಸಲು ಪ್ರಧಾನಮಂತ್ರಿ ಆವಾಸ ಯೋಜನೆ. ಸ್ವಸಹಾಯ ಸಂಘಗಳಿಗೆ ನೀಡುವ ಸಾಲದ ಪ್ರಮಾಣ ಹೆಚ್ಚಳ, ಗ್ರಾಮೀಣ ವಿದ್ಯುದ್ದೀಕರಣಕ್ಕೆ 16000 ಕೋಟಿ, 2022ರ ವೇಳೆಗೆ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ 33 ಲಕ್ಷ ಮನೆ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ 1 ಕೋಟಿ ಮನೆಗಳ ನಿರ್ಮಾಣ, ರಾಷ್ಟ್ರೀಯ ಬಿದಿರು ಮಿಷನ್​ಗೆ 1200 ಕೋಟಿ, 96 ಜಿಲ್ಲೆಗಳಿಗೆ ಪ್ರಧಾನಮಂತ್ರಿ ನೀರಾವರಿ ಯೋಜನೆ,ಮುಂದಿನ ನಾಲ್ಕು ವರ್ಷದಲ್ಲಿ ಶಿಕ್ಷಣ ಕ್ಷೇತ್ರದ ಮೂಲ ಸೌಕರ್ಯಕ್ಕೆ 4 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.