ನಾನು ಚಾಮುಂಡೇಶ್ವರಿಯಿಂದ್ಲೇ ಸ್ಪರ್ಧಿಸೋದು- ವದಂತಿಗಳಿಗೆ ತೆರೆ ಎಳೆದ ಸಿಎಂ ಸಿದ್ದು

ಸಿಎಂ ಸಿದ್ದರಾಮಯ್ಯ 2018 ರ ಚುನಾವಣೆಯಲ್ಲಿ ಕ್ಷೇತ್ರಬದಲಾವಣೆ ಮಾಡುತ್ತಾರೆ ಎಂಬ ವದಂತಿಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಚುನಾವಣೆಯಲ್ಲಿ ಸಿಎಂ ಮೈಸೂರಿನ ವರುಣಾ ಅಥವಾ ಬೆಂಗಳೂರಿನ ಹೆಬ್ಬಾಳದಿಂದ ಕಣಕ್ಕಿಳಿಯುತ್ತಾರೆ ಎಂಬ ಮಾತು ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರ ಸುಳ್ಳು. ನಾನು ಯಾವ ಕ್ಷೇತ್ರಕ್ಕೂ ಹೋಗೋದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ನನಗೆ ಟಿಕೇಟ್​ ನೀಡೋದು ರಾಹುಲ್ ಗಾಂಧಿ ವದಂತಿ ಹಬ್ಬಿಸೋರು ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಸಮಾರಂಭದಲ್ಲಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಮತ್ತೇ ಅಧಿಕಾರ ಕೊಡಿ ಎಂದು ಯಡಿಯೂರಪ್ಪ ಅಂಗಲಾಚುತ್ತಿದ್ದಾರೆ.

ನೀರಾವರಿಗಾಗಿ ಒಂದು ಲಕ್ಷಕೋಟಿ ಖರ್ಚು ಮಾಡ್ತಾರಂತೆ. ಪ್ರಧಾನಿ ಯಿಂದ ಅನುದಾನ ತಂದು ನೀರಾವರಿ ಯೋಜನೆ ರೂಪಿಸ್ತಾರಂತೆ.ಯಡಿಯೂರಪ್ಪ ಬುರುಡೇ ಬಿಡೋದೆ ಹೆಚ್ಚು. ಯಡಿಯೂರಪ್ಪನವರಿಗೆ ಈಗಾಗಲೇ ಗೊತ್ತಾಗಿದೆ. ಮತ್ತೆ ಅಧಿಕಾರಕ್ಕೆ ಬರಲ್ಲ ಅಂತ ಹಾಗಾಗಿ ಅವರು ಸುಳ್ಳು ಹೇಳುತ್ತಿದ್ದಾರೆ ಅಂತ ಸಿಎಂ ಟೀಕಿಸಿದರು. ಇನ್ನು ಮಾಜಿಪ್ರಧಾನಿ ದೇವೆಗೌಡರ್ ವಿರುದ್ಧವೂ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ದೇವೆಗೌಡ್ರಿಗೆ ಹಾಸನ ಅಂದ್ರೆ ಕರ್ನಾಟಕ. ಹಾಸನ ಬಿಟ್ಟು ಆಚೆ‌ ಹೋಗಲೇ ಇಲ್ಲ. ಅವರನ್ನು ಮಣ್ಣಿನ ಮಗ ಎಂದು ಕರೀತಾರೆ. ಅಧಿಕಾರಕ್ಕೆ ಬಂದ್ರೆ ದಲಿತರನ್ನ ಉಪಮುಖ್ಯಮಂತ್ರಿ ಮಾಡ್ತಿನಿ ಅಂತಾರೇ, ಅದರ ಬದಲು ಜೆಡಿಎಸ್​​ ಅಧಿಕಾರಕ್ಕೆ ಬಂದ್ರೆ ದಲಿತರನ್ನು ಸಿಎಂ ಮಾಡ್ತಿನಿ ಎಂದು ಘೋಷಣೆ ಮಾಡಲಿ ನೋಡೋಣ ಎಂದು ವ್ಯಂಗ್ಯವಾಡಿದರು.