ಯುಗಾದಿ ಎದುರು ಜನರಿಗೆ ಬೇವು ಕೊಟ್ಟ ಸ್ಯಾಂಡಲವುಡ್​​- ಹಬ್ಬಕ್ಕೆ ಬರ್ತಿಲ್ಲ ಯಾವುದೇ ಹೊಸ ಚಿತ್ರ!

2018: No Films released at Ugadi Festival .
2018: No Films released at Ugadi Festival .

ಹಬ್ಬಗಳಿಗೂ ಸಿನಿಮಾ ಇಂಡಸ್ಟ್ರಿಗೂ ಅವಿನಾಭಾವ ಸಂಬಂಧ. ಹಬ್ಬಗಳು ಬಂದ್ರೆ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರೋದು ವಾಡಿಕೆ.

ad


ಆದ್ರೆ ಈ ವರ್ಷ ಯುಗಾಧಿ ಹಬ್ಬಕ್ಕೆ ಸಿನಿರಸಿಕರಿಗೆ ಸಿಹಿಗಿಂತ ಕಹಿಯೇ ಜಾಸ್ತಿ.. ಯಾಕ್ ಗೊತ್ತಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಷಯ…  ಹೌದು, ಹಬ್ಬಗಳು ಬಂದ್ರೆ ಚಿತ್ರರಂಗದ ಮಂದಿಗೆ ಹಾಗು ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಖುಷಿ. ಯಾಕ್ ಗೊತ್ತಾ..? ಫೆಸ್ಟಿವೆಲ್​​ನಲ್ಲಿ ದೊಡ್ಡ ದೊಡ್ಡ ಸ್ಟಾರ್​ಗಿಳ ಸಿನಿಮಾಗಳು ತೆರೆ ಕಾಣ್ತಾವೆ. ಆದ್ರೆ ಈ ವರ್ಷ ಯುಗಾಧಿ ಹಬ್ಬಕ್ಕೆ ಮಾತ್ರ ಯಾವ್ ಸ್ಟಾರ್​​ಗಳ ಸಿನಿಮಾಗಳು ತೆರೆ ಕಾಣ್ತಿಲ್ಲ. ಹೀಗಾಗಿ ಸಿನಿ ಪ್ರೇಕ್ಷಕರಿಗೆ ಈ ವರ್ಷ ಹಬ್ಬಕ್ಕೆ ಸಿಹಿ ಬದಲು ಕಹಿ ಟ್ರೀಟ್​​ ಸಿಕ್ತಿದೆ..
ಸಾಮಾನ್ಯವಾಗಿ ಹಬ್ಬಗಳಿಕೆ ಸಿನಿಮಾ ರಿಲೀಸ್ ಮಾಡೋದು ಸೌತ್​ ಇಂಡಸ್ಟ್ರಿಯಲ್ಲಿ ವಾಡಿಕೆ. ಕನ್ನಡ ತಮಿಳ್, ತೆಲುಗು, ಮಲೆಯಾಳಂ ಸಿನಿ ಇಂಡಸ್ಟ್ರಿಗಳು ಈ ವರ್ಷದ ಯುಗಾಗಿಗೆ ಪ್ರೇಕ್ಷಕರಿಗೆ ಬೆಲ್ಲದ ಬದಲು ಬೇವು ಮಾತ್ರ ಕೊಡ್ತಿದ್ದಾರೆ. ಅದಕ್ಕೆ ಕಾರಣ ಈ ನಾಲ್ಕು ಇಂಡಸ್ಟ್ರಿಯಿಂದ ಯಾವುದೇ ಸಿನಿಮಾಗಳು ಹಬ್ಬಕ್ಕೆ ಅಂತ ತೆರೆ ಕಾಣ್ತಿಲ್ಲ.

ಅಂದ್ಹಾಗೆ ಈ ವರ್ಷ ಯುಗಾಧಿ ಹಬ್ಬಕ್ಕೆ ಯಾವು ಸಿನಿಮಾಗಳು ರಿಲೀಸ್ ಆಗ್ತಿಲ್ಲ ಯಾಕೆ ಗೊತ್ತಾ.? ಸಿನಿಮಾ ಮಂದಿ ಹಾಗು ಸಿನಿಮಾ ಪ್ರಸಾರ ಮಾಡೋ ಯುಎಫ್​ಒ ಮತ್ತು ಕ್ಯೂಬ್ ಸಂಸ್ಥೆಗಳ ಮಧ್ಯೆ ನಡೀತಿರೋ ಹಣದ ಸಂಘರ್ಷ.. ಯುಎಫ್​​ಒ ಮತ್ತು ಕ್ಯೂಬ್ ಸಂಸ್ಥೆಗಳು ಸಿನಿಮಾ ಪ್ರದರ್ಶನಕ್ಕೆ ದುಭಾರಿ ಹಣ ವಸೂಲಿ ಮಾಡ್ತಿದ್ದಾರೆ ಅಂತ ಸೌತ್​ ಚಿತ್ರರಂಗ ಯಾವುದೇ ಸಿನಿಮಾಗಳನ್ನ ರಿಲೀಸ್ ಮಾಡದೇ ಪ್ರತಿಭಟನೆ ಮಾಡ್ತಿದೆ.. ಎಫ್​​ಓ ಕ್ಯೂಬ್​ ವಿರುದ್ಧ ನಡೆಯುತ್ತಿರೋ ಪ್ರತಿಭಟನೆಯಿಂದ ಕಳೆದ ವಾರ ಯಾವ ಸಿನಿಮಾಗಳು ರಿಲೀಸ್ ಆಗಿಲ್ಲ. ಸಿನಿ ಮಂದಿಯ ಪ್ರೊಟೆಸ್ಟ್​ ಯುಗಾಧಿ ವರೆಗೂ ಕಂಟಿನ್ಯೂ ಆಗೋದ್ರಿಂದ ಹಬ್ಬಕ್ಕೆ ಯಾವ ಭಾಷಯ ಸಿನಿಮಾಗಳು ತೆರೆ ಕಾಣ್ತಿಲ್ಲ. ಹೀಗಾಗಿ ಪ್ರೇಕ್ಷಕ ಹಬ್ಬ ಅಂತ ಸಿನಿಮಾ ನೋಡೋಕೆ ಹೋದ್ರೆ ಎಲ್ಲಾ ಥಿಯೇಟ್​​​ಗಳು ಬಾಗಿಲು ಹಾಕಿರ್ತಾವೆ..

ವಿಶೇಷ ಅಂದ್ರೆ ಕನ್ನಡದಲ್ಲಿ ಹೊಸಬರ ಒಟ್ಟು ಎಂಟು ಸಿನಿಮಾಗಳು ತೆರೆ ಕಾಣ್ಬೇಕಿತ್ತು. ಆದ್ರೆ ಯಾವು ಸಿನಿಮಾವೂ ತೆರೆಗೆ ಬರ್ತಿಲ್ಲ. ಇನ್ನು ದರ್ಶನ್​​​ರ ಕುರುಕ್ಷೇತ್ರ ಡಬ್ಬಿಂಗ್ ಹಂತದಲ್ಲಿದೆ, ಯಶ್​ರ ಕೆಜಿಎಫ್​ ಇನ್ನೂ ಶೂಟಿಂಗ್ ನಡೀತಿದೆ. ಸುದೀಪ್​​, ಶಿವಣ್ಣನ ವಿಲನ್ ಪೋಸ್ಟ್​ ಪ್ರೊಡಕ್ಷನ್ ವರ್ಕ್​ ಇದೆ. ಪುನೀತ್​ ಗಣೇಶ್​​​​ರ ಯಾವ ಸಿನಿಮಾಗಳು ಇಲ್ಲ ಹೀಗಾಗಿ ಈ ವರ್ಷ ಯುಗಾಧಿ ಹಬ್ಬಕ್ಕೆ ಕನ್ನಡ ಚಿತ್ರರಂಗ ಬೆಲ್ಲದ ಬದಲು ಬೇವು ಕೊಟ್ಟಿದೆ..