420 ರಮ್ಯಾ!! ಚಿತ್ರನಟಿ ರಮ್ಯಾಗೆ ಈ ಪಟ್ಟ ನೀಡಿದ್ಯಾರು ಗೊತ್ತಾ ?

ಚಿತ್ರನಟಿ ರಮ್ಯಾ ಎಲ್ಲರಿಗೂ ಗೊತ್ತು. ಸಿನೇಮಾ ರಂಗದಲ್ಲಿ ಮಾಡಿರುವ ಸಾಧನೆಗಳಿಗಿಂತ ರಾಜಕಾರಣದಲ್ಲಿ ರಮ್ಯಾ ಪ್ರಚಾರ ಮತ್ತು ಅಪಪ್ರಚಾರಕ್ಕೆ ಒಳಗಾಗಿದ್ದೇ ಹೆಚ್ಚು. ಈಗ ಮತಗಟ್ಟೆಯಲ್ಲೂ ರಮ್ಯಾ ಫೇಮಸ್ ಆಗಿದ್ದಾರೆ !

ಮಂಡ್ಯದ ಮಾಜಿ ಸಂಸದೆಯಾಗಿರುವ ರಮ್ಯಾ ದಿವ್ಯ ಸ್ಪಂದನಾ ಅಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಿದ್ದಾರೆ. ಮಂಡ್ಯ ನಗರದ 10ನೇ ವಾರ್ಡ್ ನ ಮತದಾರರಾಗಿರೋ ರಮ್ಯಾ, 189ನೇ ಸಂಖ್ಯೆಯ ಮಂಡ್ಯ ವಿಧಾನ ಸಭಾ ಕ್ಷೇತ್ರಕ್ಕೆ ಮತಚಲಾಯಿಸಬೇಕಿದೆ. ಮತದಾರರ ಪಟ್ಟಿಯಲ್ಲಿ 420ನೇ ಕ್ರಮ ಸಂಖ್ಯೆಯಲ್ಲಿ ರಮ್ಯಾ ಹೆಸರು ನಮೂದಾಗಿದೆ.  ಮಂಡ್ಯ ವಿದ್ಯಾನಗರದ PLD ಬ್ಯಾಂಕ್ ನ ಮತಕೇಂದ್ರದಲ್ಲಿ ಮತ ಚಲಾಯಿಸಬೇಕಾಗಿರುವ ರಮ್ಯಾ ಚಲಾಯಿಸಬೇಕಿದೆ. ಮಂಡ್ಯದ ವಿದ್ಯಾನಗರದಲ್ಲಿ ಬಾಡಿಗೆ ಮನೆ ಪಡೆದು ಸದ್ಯ ದೆಹಲಿಯಲ್ಲಿರೋ ರಮ್ಯಾ, ಕಳೆದ ಸಂಸತ್ ಚುನಾವಣೆ ಸಂಧರ್ಭ ಮಂಡ್ಯದಲ್ಲೇ ಮನೆ ಮಾಡುವುದಾಗಿ ಹೇಳಿದ್ದರು. ಆದರೆ ಬಾಡಿಗೆ ಮನೆ ಪಡೆದು, ದೆಹಲಿಯಲ್ಲಿರುವ ರಮ್ಯಾ, ಜನರ ಪಾಲಿಗೆ 420 ಆಗಿದ್ದಾರೆಯೇ ? ಮಂಡ್ಯದಲ್ಲಿ ರಮ್ಯಾ ನಮಗೆ 420 ಬುದ್ದಿ ತೋರಿಸಿದ್ರು ಅಂತ ಹೇಳುವ ಜನರೆಷ್ಟು ಇದ್ದಾರೋ ಅಷ್ಟೇ ಪ್ರಮಾಣದಲ್ಲಿ ಅವರ ಅಭಿಮಾನಿಗಳೂ ಇದ್ದಾರೆ. ಆದರೆ ರಮ್ಯಾಗೆ ಚುನಾವಣಾ ಅಧಿಕಾರಿಗಳು 420 ನಂಬರ್ ನೀಡಿದ್ದು ಕಾಕತಾಳೀಯವಷ್ಟೆ !