ಜೈಲು ಸಲ್ಮಾನ್ ಗೆ : ಶಿಕ್ಷೆ ನಿರ್ಮಾಪಕರಿಗೆ !! 1500 ಕೋಟಿ ದಂಡ ತೆತ್ತ ಬಾಲಿವುಡ್ !!

5 years of Jail to Salman Khan: 1500 Crores of Rupees loss to Bollywood.
5 years of Jail to Salman Khan: 1500 Crores of Rupees loss to Bollywood.

ಸಲ್ಮಾನ್ ಖಾನ್ ಜೈಲೇನೋ ಆಯ್ತು. ಆದರೆ ಶಿಕ್ಷೆ ಮಾತ್ರ ನಿರ್ಮಾಪಕರಿಗೆ ! ಹೌದು. ಸಲ್ಮಾನ್ ಜೊತೆ ಸಿನೇಮಾಕ್ಕಾಗಿ ಕೋಟಿ ಕೋಟಿ ಹೂಡಿಕೆ ಮಾಡಿದ್ದ ನಿರ್ಮಾಪಕರು ಇದೀಗ ತಲೆಮೇಲೆ ಕೈಹೊತ್ತುಕೊಳ್ಳುವಂತಾಗಿದೆ.

 ಸಲ್ಮಾನ್ ಖಾನ್ ಮುಖ್ಯಪಾತ್ರದಲ್ಲಿ ರೆಮೋ ಡಿಸೋಜಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ರೇಸ್-3’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಶೇಕಾಡ 95% ರಷ್ಟು ಶೂಟಿಂಗ್ ಮುಗಿದಿರುವಾಗ ಸಲ್ಲುಗೆ ಶಿಕ್ಷೆಯಾದ್ರೆ ಚಲನಚಿತ್ರದ ಕಥೆಯೇನು ಎಂಬುದು ನಿರ್ಮಾಪಕರ ಆತಂಕವಾಗಿದೆ. ಸುಮಾರು 100 ಕೋಟಿ ವೆಚ್ಚದಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು ಇದೀಗ ರೆಮೋ ಡಿಸೋಜಾ ಆಕಾಶ ನೋಡುವಂತಾಗಿದೆ.ದಬಾಂಗ್ ಸಿನೇಮಾ ಹಿಟ್ ಆದ ಬಳಿಕ ಅದೇ ದಬಾಂಗ್ ಚಿತ್ರತಂಡದಿಂದ ‘ದಬಾಂಗ್-3’ ಸಿನಿಮಾ ಮಾಡಲಾಗುತ್ತಿದ್ದು, ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಲಾಗಿದೆ.

ಸಲ್ಮಾನ್ ಖಾನ್ ಸಂಬಂಧಿ ಅತುಲ್ ಅಗ್ನೋತ್ರಿ ನಿರ್ಮಾಣದಲ್ಲಿ ಭರತ್ ಎಂಬ ಚಿತ್ರವನ್ನ ಸಲ್ಲು ಒಪ್ಪಿಕೊಂಡಿದ್ದಾರೆ. ಕೊರಿಯನ್ ಹಿಟ್ ಸಿನಿಮಾ ‘ಓಡ್ ಟು ಮೈ ಫಾದರ್’ ಚಿತ್ರದ ರೀಮೇಕ್ ಇದು.’ಕಿಕ್’ ಎನ್ನುವ ಸಿನಿಮಾಗೆ ಸಲ್ಮಾನ್ ಖಾನ್ ಸಿದ್ದವಾಗಿದ್ದಾರೆ. 2019ರ ಕ್ರಿಸ್ ಮಸ್ ವೇಳೆ ಈ ಚಿತ್ರವನ್ನ ಬಿಡುಗಡೆ ಮಾಡುವಂತೆ ಮೇಕಿಂಗ್ ಮಾಡಲು ಪ್ಲಾನ್ ಮಾಡುತ್ತಿದ್ದಾರೆ. ಹಾಗೂ ಸೋನಿ ಟಿವಿಯಲ್ಲಿ ಪ್ರಸಾರವಾಗುವ ದಸ್ ಕ ದಮ್ ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲಾ ಸಿನಿಮಾಗಳ ಮಧ್ಯೆ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿ ಬರಲಿದೆ. ಸಲ್ಮಾನ್ ಖಾನ್ ಜೈಲಿಗೆ ಹೋಗಿರೋದ್ರಿಂದ ಬಿಗ್ ಬಾಸ್ ನಿಲ್ಲೋ ಸಾದ್ಯತೆ ಇದೆ. ಒಟ್ಟಾರೆ ಜೈಲು ಘೋಷಣೆಯಾಗಿದ್ದು ಸಲ್ಮಾನ್ ಖಾನ್ ಗೆ. ಶಿಕ್ಷೆಗೆ ಒಳಗಾಗಿದ್ದು ನಿರ್ಮಾಪಕರು.