ವರಮಹಾಲಕ್ಷ್ಮಿ ಮುಂದೆ ಕಂತೆಕಂತೆ ನೋಟು ಇಟ್ಟು ಪೋಸು ಕೊಟ್ಟಿದ್ದ ಬಿಡಿಎ ಸೂರಿ ಅಲಿಯಾಸ್ ಕ್ರಾಸ್​ ಕಟಿಂಗ್​ ಸೂರಿಯ ಸ್ಫೋಟಕ ಮಾಹಿತಿ ಬಿಟಿವಿಗೆ ಸಿಕ್ಕಿದೆ. ಬಿಡಿಎ ಸೂರಿ ಇದುವರೆಗೂ ಕೊಟ್ಟಿರುವ ಲಂಚವೇ ಸಾವಿರ ಕೋಟಿ ಎನ್ನಲಾಗ್ತಿದೆ. ಬಿಡಿಎನ ಹಿಂದಿನ ಸೆಕ್ರೆಟರಿ ರಾಜಶೇಖರ್ ಸೈಟ್ ಡೀಲ್​ ಹೇಳಿಕೊಟ್ಟಿದ್ದ. ಈತನ ಅಕ್ರಮಗಳನ್ನು ಬಿಡಿಎ ಎಸ್​ಪಿ ಮಲ್ಲಿಕಾರ್ಜುನ್ ಸ್ವಾಮಿ ಮುಚ್ಚಿಹಾಕಿದ್ದರು. BDA ಕಮಿಷನರ್​ರಿಂದ ಹಿಡಿದು ಕಿರಿಯ ಎಂಜಿನಿಯರ್​​​ವರೆಗೂ ಸೂರಿ ಭರ್ಜರಿ ಲಂಚ ನೀಡ್ತಿದ್ದ. ಕಳೆದ 15 ವರ್ಷದಲ್ಲಿ ಈತ ಕೊಟ್ಟಿರೋ ಲಂಚವೇ ಸಾವಿರ ಕೋಟಿ. ಈತನ ಲಂಚದ ಲಿಸ್ಟ್​ನಲ್ಲಿ ಅರ್ಧ ಡಜನ್​ MLA, ಮೂವರು MLCಗಳಿದ್ದಾರೆ. ಈತನನ್ನು ಸಿಐಡಿ ಬಂಧಿಸಿದ್ರೆ ಬಿಡಿಎಗೆ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಾಪಸ್​ ಬರಲಿದೆ. ಬಿಟಿಎ ಸೈಟ್​ಗಳಲ್ಲೇ ಕಾರ್ನರ್​ ಸೂರಿ ತನ್ನ ತಿಜೋರಿ ತುಂಬಿಸಿಕೊಂಡಿದ್ದ. 20%​​ ಲೀಗಲ್​​ ಸೈಟ್, 80% ನಕಲಿ ದಾಖಲೆ ಸೈಟ್​ಗಳ ದಂಧೆಯನ್ನು ಈತ ಮಾಡ್ತಿದ್ದ. ಖಾಲಿ ಸೈಟ್​ ನೋಡಿದ್ರೆ ಅದಕ್ಕೆ 3 ಕೋಟಿ ಕೊಡುವ ಗಿರಾಕಿ ಹುಡುಕ್ತಿದ್ದ ಸೂರಿ ಬಿಡಿಎ ಅಧಿಕಾರಿಗಳಿಗೆ ಕೋಟಿ ಲಂಚ ಕೊಟ್ಟು ನಕಲಿ ದಾಖಲೆ ಸೃಷ್ಟಿ ಮಾಡ್ತಿದ್ದ. ಅದನ್ನು ಕ್ಷಣಾರ್ಧದಲ್ಲಿ ಇನ್ನೊಬ್ಬರ ಹೆಸರಿಗೆ ನೋಂದಣಿ ಮಾಡಿಸುತ್ತಿದ್ದ. ಹೀಗೆ ಮೋಸ ಮಾಡ್ತಿದ್ದ ಸೂರಿಯಿಂದ ರೌಡಿ ಅರಸಪ್ಪ ಲಕ್ಷಾಂತರ ರೂಪಾಯಿ ವಸೂಲಿ ಮಾಡ್ತಿದ್ದ. ಸೂರಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿದ್ರೆ ರಾಜ್ಯವೇ ಬೆಚ್ಚಿ ಬಿಳುವ ಮಾಹಿತಿಗಳು ಹೊರ ಬೀಳಲಿವೆ.
======
ಈ ಮಧ್ಯೆ ಸೂರಿ ಅಲಿಯಾಸ್​​ ಸೂರ್ಯ ನಾರಾಯಣ ಮೇಲೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ. ಬಿಡಿಎ ಅಧಿಕಾರಿ ಬಿ.ಶಿವಸ್ವಾಮಿ ಎಂಬುವರು ದೂರು ನೀಡಿದ್ದರು. ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಿಡಿಎಗೆ ನಷ್ಟ ಉಂಟುಮಾಡಿದ್ದ ಆರೋಪ ಸೂರಿ ಮೇಲಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ವಳಗೇರ ಹಳ್ಳಿಯ ಲಕ್ಷ್ಮಿದೇವಿ ಎಂಬುವರ ಸರ್ವೆ ನಂ.26/2ರಲ್ಲಿ 4.16 ಎಕರೆ ಭೂಮಿಯಲ್ಲಿ 2.6 ಎಕರೆಯನ್ನು ರಸ್ತೆಗಾಗಿ ಬಿಡಿಎ ಸ್ವಾಧೀನ ಮಾಡಿಕೊಂಡಿತ್ತು. ಇದಕ್ಕೆ ಬದಲಿಯಾಗಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಇದೇ ಜಮೀನಿನ ಪಕ್ಕ ಮುನಿಕೃಷ್ಣಪ್ಪ ಎಂಬುವರ ಭೂಮಿ ರಸ್ತೆಗೆ ಬಳಕೆ ಆಗದಿದ್ದರೂ ಸೂರಿ, ಆತನ ಸ್ನೇಹಿತರಾದ ಗುರು, ಯಶವಂತ ಎಂಬುವರು ಮುನಿಕೃಷ್ಣಪ್ಪ ಎಂಬಾತನ ಹೆಸರಲ್ಲೇ ನಕಲಿ ದಾಖಲೆ ಸೃಷ್ಟಿ ಮಾಡಿದ್ದ. ಇದಕ್ಕೆ ಬಿಡಿಎ ಅಧಿಕಾರಿ ಮಧುಸೂದನ್​ ನೆರವು ನೀಡಿದ್ದರು. ಹೊಸ ಕಡತ ಸೃಷ್ಟಿಸಿದ್ದ ಮಧುಸೂದನ್​​ ಅದನ್ನು ಉಪಕಾರ್ಯದರ್ಶಿ-1ರರಲ್ಲಿ ಲಕ್ಷ್ಮಿದೇವಿ ಅವರಿಗೆ ಸೇರಿದ ಕಡತದಲ್ಲಿ ಸೇರಿಸಿದ್ದ. ಇದೇ ಕಡತ ಆಧರಿಸಿ ಹೆಚ್​ಎಸ್​​ಆರ್​ ಬಡಾವಣೆಯಲ್ಲಿ 9 ಬದಲಿ ನಿವೇಶನ ಮಂಜೂರು ಮಾಡಿಸಿಕೊಂಡಿದ್ದ. ಈ ನಿವೇಶನಗಳಿಗೆ ಕ್ರಯ ಪತ್ರವನ್ನೂ ಮಾಡಿಸಿಕೊಂಡಿದ್ದ ಸೂರ್ಯನಾರಾಯಣ ಆನಂತರ ಕೆಲವು ನಿವೇಶನಗಳನ್ನ ಬೇರೆಯವರಿಗೆ ಮಾರಾಟ ಮಾಡಿದ್ದರು. ಈ ಪ್ರಕರಣದಲ್ಲಿ ಬಿಡಿಎಗೆ ಅಪಾರ ನಷ್ಟ ಆಗಿದೆ ಎಂದು ಶಿವಸ್ವಾಮಿ ಅವ್ರು ದೂರಿನಲ್ಲಿ ಉಲ್ಲೇಖಿಸಿದ್ದರು.
============

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here