ನಿನ್ನೆ ಮ್ಯಾಚ್​​ ಹೈಲೈಟ್ಸ್ 87 ರ ಹರೆಯದ ಚಾರುಲತಾ ಪಟೇಲ್​! ಒಂದೇ ದಿನದಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್​ ಆದ ವೃದ್ಧೆ!!

ನಿನ್ನೆ ಬರ್ಮಿ‌ಂಗ್‌ ಹ್ಯಾಂನಲ್ಲಿ ನಡೆದ ಮ್ಯಾಚ್​​ನಲ್ಲಿ ಕ್ರಿಕೆಟ್​ಗಿಂತ ಜಾಸ್ತಿ ಹೈಲೈಟ್​ ಆಗಿದ್ದು, ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹದೊಂದಿಗೆ ಅಭಿಮಾನ ಪ್ರದರ್ಶಿಸುತ್ತಿದ್ದ ವೃದ್ಧೆ ಚಾರುಲತಾ ಪಟೇಲ್.

ad


ಹೌದು ನಿನ್ನೆ ಬರ್ಮಿಂಗ್ ಹ್ಯಾಂನಲ್ಲಿ ನಡೆದ ಇಂಡಿಯಾ-ಬಾಂಗ್ಲಾದೇಶ ಕ್ರಿಕೆಟ್ ಪಂದ್ಯಾವಳಿಯ ಪ್ರತಿ ಬಾಲ್​, ಪೋರ್ ಸಿಕ್ಸ್​ನಲ್ಲೂ 87ರ ಹರೆಯದ ಚಾರುಲತಾ ಪೀ ಪೀ ಊದಿ ಸಂಭ್ರಮಿಸುತ್ತಿದ್ದರು. ಅವರ ಉತ್ಸಾಹ, ಖುಷಿ , ಸಂಭ್ರಮ ಎಳೆ


ಅಷ್ಟೇ ಅಲ್ಲ ಕೊನೆಯಲ್ಲಿ ಇಂಡಿಯಾ ವಿನ್​ ಆಗುತ್ತಿದ್ದಂತೆ ಅಜ್ಜಿ ಕುಣಿದು ಕುಪ್ಪಳಿಸಿದ್ರು. ಇವರ ಕ್ರಿಕೆಟ್ ಅಭಿಮಾನವನ್ನು ಕಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮ್ಯಾಚ್ ಮುಗಿದ ಮೇಲೆ ಅಜ್ಜಿಯನ್ನು ಮೀಟ್ ಮಾಡಿ ಆಶೀರ್ವಾದ ಪಡೆದರು.


ಸಧ್ಯ ನಿನ್ನೆಯಿಂದ ಸೋಷಿಯಲ್​ ಮೀಡಿಯಾದಲ್ಲಿ ಅಜ್ಜಿಯ ಉತ್ಸಾಹ, ಕುಣಿತ, ಪೀಪಿ ಊದಿದ್ದು , ಕ್ರಿಕೆಟ್ ಅಭಿಮಾನಿಗಳು ಅಜ್ಜಿಯ ಜೊತೆ ಪೋಟೋ ತೆಗೆದುಕೊಂಡು ಸಂಭ್ರಮಿಸಿದ ಪೋಟೋ ವಿಡಿಯೋಗಳು ಫುಲ್ ವೈರಲ್​ ಆಗಿದ್ದು, ಅಜ್ಜಿ ಚಾರುಲತಾ ಸಧ್ಯಕ್ಕೆ ಸೋಷಿಯಲ್​ ಮೀಡಿಯಾ ಸೂಪರ್ ಸ್ಟಾರ್ ಆಗಿರೋದಂತು ಸತ್ಯ.