ಈ ಸುಂದರಿ ಮಾಡಿದ ಅಪರಾಧ ಏನು ಗೊತ್ತಾ? ಈಗ ಅವಳೆಲ್ಲಿದ್ದಾಳೆ?

 

ಪತಿಯನ್ನು ಕೊಂದು ಸುಳ್ಳು ಕಥೆ ಹೇಳಿದ್ದ ಸುಂದರಿ ಹಂತಕಿ.. ತಾನೇ ಕೊಲೆ ಮಾಡಿ ಅಸಹಜ ಸಾವು ಅಂತಾ ನಾಟಕವಾಡಿದ್ದ ಪತ್ನಿ..ಪೊಲೀಸರ ತನಿಖೆಯಿಂದ ಪತಿಯನ್ನು ಹತ್ಯೆ ಮಾಡಿದ ಪತ್ನಿ ಅರೆಸ್ಟ್… ಶವಪರೀಕ್ಷೆ ವೇಳೆ ಭಾರತಿಯ ಬಣ್ಣ ಬಯಲು… ಕುಡಿದ ತೊಂದರೆ ಮಾಡ್ತಾಯಿದ್ದ ಪತಿಯನ್ನೆ ಹತ್ಯೆ ಮಾಡಿದ ಪತ್ನಿ…

ಪತಿಯನ್ನು ಹತ್ಯೆ ಮಾಡಿದ ಪತ್ನಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಮದ್ಯ ಸೇವನೆ ಮಾಡಿರೋ ಪತಿ ಶಿವಯೋಗಿ ಹಳಿಮನಿ ಎನ್ನುವಾತನ ಪತ್ನಿ‌ ಭಾರತಿ ಹಳಿಮನಿ ಹೊಡೆದು ಕೊಲೆ ಮಾಡಿ ಇದು ಅಸಹಜ ಸಾವು ಅಂತಾ ಕಥೆ ಹೇಳಿದ್ದಳು.

ಕುಡಿದು ಮನೆಯಲ್ಲಿ ಮಂಚದ ಮೇಲೆದ ಬಿದ್ದು ಸಾವನ್ನಪ್ಪಿದ್ದಾನೆ ಅಂತಾ ವಿದ್ಯಾನಗರ ಪೊಲೀಸರ ಸುಳ್ಳು ಕಥೆ ಹೇಳಿ ಕೊಲೆ ಕೇಸನಿಂದ ಪಾರಾಗಲು ಪ್ರಯತ್ನನಡೆಸಿದ್ದಳು. ಆದ್ರೆ ಪೊಲೀಸರು ಶವಪರೀಕ್ಷೆ ನಡೆಸಿದಾಗ ಅದು ಸಹಜ ಸಾವು ಅಲ್ಲಾ, ಮೈಮೇಲೆ ಬಲವಾಗಿ ಹೊಡೆದು ಕೊಲೆ ಮಾಡಿರೋದಾಗಿ ವರದಿ ಬಂದಿದ್ದು, ಅದನ್ನು ನೋಡಿದ ಪೊಲೀಸರು ಒಂದು ಕ್ಷಣ ಬೆಚ್ಚಿ ಬಿದ್ದಿದ್ರು. ನಂತರ ಪೊಲೀಸರ ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿ ಭಾರತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ…

ವರದಿ: ಮಂಜು ಪತ್ತರ್. ಬಿಟಿವಿ ಹುಬ್ಬಳ್ಳಿ