ಕಾಮುಕನ ತೃಷೆಗೆ ಬಲಿಯಾಯ್ತು ಮುಗ್ಧ ಬಾಲಕಿಯ ಬದುಕು..

ಆ ವಿದ್ಯಾರ್ಥಿನಿ ಎಂದಿನಂತೆ ತನ್ನ ಸ್ನೇಹಿತೆಯೊಂದಿಗೆ ಶಾಲೆ ಮುಗಿಸಿಕೊಂಡು ಮನೆ ಕಡೆ ಹೊರಟ್ಟಿದ್ದಳು, ತುಂತುರು ಮಳೆಯಲ್ಲಿ ನೆನಯುತ್ತಾ, ಮನೆಯ ದಾರಿಯಲ್ಲಿದ್ದ ಗುಲಾಬಿ ತೋಟವನ್ನು ಕಂಡು ಖುಷಿ ಖುಷಿಯಾಗಿ ಕನಸುಗಳನ್ನು ಹೊತ್ತು ಹೆಜ್ಜೆಹಾಕಿದ್ದಳು, ಆದ್ರೆ ಆ ಬಾಲಕಿಗೇನು ಗೊತ್ತು ಗುಲಾಬಿ ತೋಟಲ್ಲಿ ಆ ಕೀಚಕನೊಬ್ಬ ಹೊಂಚು ಹಾಕಿರುವುದು.. ಆ ಕಾಮುಕನ ಕಾಮತೃಷೆಗೆ ಅರಳಬೇಕಿದ್ದ ಬಾಲಕಿ ಮುದುಡಿಹೋಗಿದ್ದಳು.. ಅಷ್ಟಕ್ಕೂ ಅಲ್ಲೇನಾಯ್ತು ಈ ವರದಿ ನೋಡಿ..

  

ಸುತ್ತಲೂ ನಿಂತು ಗಾಬರಿಯಿಂದ ನೋಡುತ್ತಿರುವ ಸಾವಿರಾರು ಜನ್ರು.. ಮತ್ತೊಂದೆಡೆ ರಸ್ತೆ ತಡೆದು ಹೋರಾಟ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳು, ಕಣ್ಣೀರಿಟ್ಟು ರೋಧಿಸುತ್ತಿರುವ ತಾಯಿ ಹಾಗೂ ಕುಟುಂಬಸ್ಥರು, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ. ಹೌದು ನಿನ್ನೆ ಸಂಜೆ ಮಾಲೂರು ಪಟ್ಟಣವೇ ಅಲ್ಲೋಲ ಕಲ್ಲೋಲವಾಗಿ ಹೋಗಿತ್ತು, ಇಡೀ ಪಟ್ಟಣದ ಜನ್ರು ಬೆಚ್ಚಿಬಿದ್ದಿದ್ರು. ಅಲ್ಲೇನಾಗಿದೆ ಎಂದು ಕೇಳಿದ ಜನರ ಗಂಟಲೇ ಒಣಗಿಹೋಗಿತ್ತು, ನಿಜಕ್ಕೂ ಅಲ್ಲೊಂದು ಘನ ಘೋರ ಘಟನೆಯೊಂದು ನಡೆದು ಹೋಗಿತ್ತು. ಮಾಲೂರು ಪಟ್ಟಣದ ಇಂದಿರಾನಗರ ನಿವಾಸಿ ರವಿಕುಮಾರ್​ ಹಾಗೂ ಶ್ರೀಲಕ್ಷ್ಮಿ ಎಂಬುವರ ಹಿರಿಯ ಪುತ್ರಿ ರಕ್ಷಿತಾ ಮಾಲೂರು ಪಟ್ಟಣದಲ್ಲಿರುವ ಬಿಜಿಎಸ್​ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಳು. ಎಂದಿನಂತೆ ನಿನ್ನೆ ಶಾಲೆ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದಳು, ಸಣ್ಣದಾಗಿ ಮಳೆಹನಿ ಆರಂಭವಾಗಿತ್ತು, ಕೊಡೆ ಹಿಡಿದುಕೊಂಡು ಇಬ್ಬರು ಸ್ನೇಹಿತೆಯರು ಮನೆಯತ್ತ ಹೆಜ್ಜೆ ಹಾಕಿದ್ರು. ಈ ಸಂದರ್ಭದಲ್ಲಿ ಮಾಲೂರಿನ ರೈಲ್ವೆ ಬ್ರಿಡ್ಜ್​ ಬಳಿ ಬಾಲಕಿ ರಕ್ಷಿತಾ ತನ್ನ ಸ್ನೇಹಿತೆ ಪ್ರೀತಿ ನಡೆದು ಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ಯುವಕನೊಬ್ಬ ಗುಲಾಬಿ ತೋಟದಲ್ಲಿ ಅವಿತು ಕುಳಿತಿದ್ದನಂತೆ, ಇನ್ನೇನು ರಕ್ಷಿತಾ ಹಾಗೂ ಆಕೆಯ ಸ್ನೇಹಿತೆ ಪ್ರೀತಿ ತೋಟದ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರಾಕ್ಷಸನಂತೆ ಮೇಲೆರಗಿದ ಆ ಪಾಪಿ, ರಕ್ಷಿತಾಳನ್ನು ಹೊತ್ತೊಯ್ದಿದ್ದಾನೆ. ಇದನ್ನು ಕಂಡು ಗಾಬರಿಯಾಗಿ ಕಿರುಚಾಡುತ್ತಾ ಅಲ್ಲಿಂದ ಓಡಿಹೋದ ಪ್ರೀತಿ ವಿಷಯವನ್ನು ಓಡಿಹೋಗಿ ತನ್ನಪ್ಪನಿಗೆ ತಿಳಿಸಿದ್ದಾಳೆ, ವಿಷಯ ತಿಳಿದು ಪ್ರೀತಿ ತಂದೆ ಬಾಬು ಹಾಗೂ ರಕ್ಷಿತಾ ಪೋಷಕರು ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಆ ಅಪರಿಚಿತ ಕೀಚಕ ರಕ್ಷಿತಾಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಅಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಕ್ಷಿತಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರು ರಕ್ಷಿತಾಳ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಇನ್ನು ವಿಷಯ ತಿಳಿಯುತ್ತಿದ್ದಂತೆ ಮಾಲೂರು ಪೊಲೀಸರು ಸ್ಥಳಕ್ಕೆ ದಾವಿಸಿದ್ರು, ನೋಡ ನೋಡುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ರು, ಅಲ್ಲೇನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಆಕ್ರೋಶ ಭರಿತ ಜನರು ಪ್ರತಿಭಟನೆಗೆ ಇಳಿದಿದ್ರು. ಪೊಲೀಸರಿಗೆ ಆರೋಪಿಯನ್ನು ಬಂದಿಸುವಂತೆ ಒತ್ತಾಯಿಸಿದ್ರು. ಇನ್ನು ಇಂದು ಬೆಳಿಗ್ಗೆಯಿಂದ ವಿವಿದ ಸಂಘಟನೆಗಳ ಕಾರ್ಯಕರ್ತರು, ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲಾ ಆಡಳಿತ ಮಂಡಳಿಗಳು ಸ್ವಯಂಘೊಷಿತವಾಗಿ ಮಾಲೂರು ಪಟ್ಟಣದ ಎಲ್ಲಾ ಶಾಲೆಗಳಿಗೆ ರಜೆ ಘೊಷಿಸಿದ್ರು. ಕೊಲೆಯಾದ ರಕ್ಷಿತಾಳ ಸಾವಿಗೆ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಆರಂಭಿಸಿದ್ರು. ಮಾಲೂರಿನ ಕ್ರೀಡಾಂಗಣದಲ್ಲಿ ಜಮಾಯಿಸಿದ್ದ ಸಾವಿರಾರು ವಿದ್ಯಾರ್ಥಿಗಳು, ವಿವಿದ ಸಂಘಟನೆಗಳ ಕಾರ್ಯಕರ್ತರು ರಕ್ಷಿತಾಳ ಪೋಟೋ ಹಿಡಿದು ಐದು ಗಂಟೆಗೂ ಹೆಚ್ಚುಕಾಲ ಪಟ್ಟಣದ ಮುಖ್ಯ ರಸ್ತೆ ತಡೆದು ಪ್ರತಿಭಟನೆ ಮಾಡಿದ್ರು. ಆರೋಪಿಯನ್ನು ಬಂದಿಸುವವರೆಗೂ ಪ್ರತಿಭಟನೆ ಕೈಬಿಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಮಾಲೂರು ಪೊಲೀಸ್​ ಠಾಣೆ ಹಾಗೂ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ನ್ಯಾಯ ಕೇಳಿದ್ರು. ಇದೇ ವೇಳೆ ಮಾಲೂರಿಗೆ ಬೇಟಿ ನೀಡಿದ ಕೇಂದ್ರ ವಲಯ ಐಜಿಪಿ ಬಿ.ದಯಾನಂದ್​ ಬೇಟಿ ನೀಡಿ ನಂತರ ಮಾತನಾಡಿ ಶೀಘ್ರವಾಗಿ ಆರೋಪಿಯನ್ನು ಪತ್ತೆಹಚ್ಚಿ ಬಂದಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಎಸ್​ಪಿ ರೋಹಿಣಿ ಕಟೋಚ್​ ಸಪೆಟ್​, ಹೆಚ್ಚುವರಿ ಎಸ್ಪಿ ರಾಜೀವ್​ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸೇರಿದಂತೆ ಘಟನಾ ಸ್ಥಳಕ್ಕೆ ಬೇಟಿ ನೀಡಿದ್ರು.

ಇನ್ನು ಕೊಲೆಯಾದ ರಕ್ಷಿತಾಳಿಗೆ ಮಾಲೂರು ಪಟ್ಟಣದ ಬಿಜಿಎಸ್​ ಶಾಲೆ ಸೇರಿದಂತೆ ವಿವಿದ ಶಾಲೆಗಳಲ್ಲಿ ರಕ್ಷಿತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೊಲೆಯಾದ ರಕ್ಷಿತಾ ಆತ್ಮಕ್ಕೆ ಶಾಂತಿ ಕೋರಿದ್ರು, ಅಲ್ಲದೆ ಪೊಲೀಸ್​ ಇಲಾಖೆ ಕೂಡಾ ಅರೋಪಿಯ ಬಂದನಕ್ಕೆ ಕಾರ್ಯಚರಣೆ ಶುರುಮಾಡಿದ್ದು ಆದಷ್ಟು ಬೇಗ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ್ರು ಒಟ್ಟಾರೆ ಘಟನೆಯಿಂದ ಮಾಲೂರು ಪಟ್ಟಣವೇ ಬೆಚ್ಚಿಬಿದ್ದಿದ್ದು, ಕೂಡಲೇ ಅರೋಪಿ ಯನ್ನು ಬಂದಿಸಿ ಗಲ್ಲಿಗೇರಿಸಬೇಕು ಅನ್ನೋ ಕೂಗು ಜೋರಾಗಿಯೇ ಕೇಳಿಬಂದಿತ್ತು..