ತೆರೆದ ವಾಹನದಲ್ಲಿ ಸರ್ಕಾರಿ ಅಧಿಕಾರಿಯ ಅದ್ದೂರಿ ಮೆರವಣಿಗೆ! ಜನರ ಅಭಿಮಾನಕ್ಕೆ ಕಣ್ಣೀರಾದ ದಿವ್ಯಾಶಿವರಾಂ!!

ಸರ್ಕಾರಿ ಅಧಿಕಾರಿಗಳೆಂದರೆ ಲಂಚ ಕೋರರು, ಸೋಮಾರಿಗಳು ಅನ್ನೋ ಅಭಿಪ್ರಾಯ ಜನರಲ್ಲಿದೆ. ಇದಕ್ಕೆ ಕಾರಣ ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿ.  ಅದರೆ ಬೆಳಗಾವಿಯ ತೆಂಗು ಮಂಡಳಿಯಲ್ಲಿ ಸಿಇಓ ಆಗಿ ಆಡಳಿತ ನಡೆಸಿದ್ದ ಜನರ ಮೆಚ್ಚಿನ ಅಧಿಕಾರಿ ದಿವ್ಯಾ ಶಿವರಾಂ  ಮಾತ್ರ ತಮ್ಮ ದಕ್ಷ ಆಡಳಿತದಿಂದಲೇ ಹೆಸರಾಗಿದ್ದು,ಅವರ ವರ್ಗಾವಣೆ ವೇಳೆ ಜನರು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ ಜನ ಕಣ್ಣೀರಿಟ್ಟು ಬೀಳ್ಕೊಟ್ಟ ಹೃದಯಸ್ಪರ್ಶಿ ಘಟನೆ ನಡೆದಿದೆ.

ad

ಬೆಳಗಾವಿ ತೆಂಗು ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಿವ್ಯಾ ಶಿವರಾಂ ತಮ್ಮ ಜನಸ್ಮೇಹಿ ಆಡಳಿತದಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದೀಗ ಅವರಿಗೆ ದೆಹಲಿಯ ಪ್ರಧಾನಿ ಕಚೇರಿಗೆ ವರ್ಗಾವಣೆಯಾಗಿದೆ. ಹೀಗಾಗಿ ದೆಹಲಿಗೆ ಹೊರಟ ಜನಪರ ಅಧಿಕಾರಿ ದಿವ್ಯಾ ಅವರನ್ನು ಜನರು ಅದ್ದೂರಿ ಸಮಾರಂಭ ಹಾಗೂ ತೆರೆದ ವಾಹನದಲ್ಲಿ ಮೆರವಣಿಗೆ ಮಾಡುವ ಮೂಲಕ ಬೀಳ್ಕೊಟ್ಟಿದ್ದಾರೆ.

ದಿವ್ಯಾ ಶಿವರಾಂ ತಮ್ಮ ಸ್ವಪ್ರೇಮ ನಡವಳಿಕೆ, ಸ್ನೇಹ ಮಯ ಮಾತು, ಭ್ರಷ್ಟಾಚಾರ ರಹಿತ ಕರ್ತವ್ಯದಿಂದ ಬೆಳಗಾವಿ ಜಿಲ್ಲೆಯಲ್ಲಿ ಅತ್ಯುತ್ತಮ ಅಧಿಕಾರಿಯಾಗಿ ಖ್ಯಾತರಾಗಿದ್ದರು. ಜನ ನೀಡಿದ ಅದ್ದೂರಿ ವಿದಾಯಕ್ಕೆ ದಿವ್ಯಾ ಶಿವರಾಂ ಅವರು ಭಾವುಕರಾದರು. ತಮ್ಮ ಸಹೋದ್ಯೋಗಿಗಳಿಗೆ, ಉನ್ನತ ಅಧಿಕಾರಿಗಳಿಗೆ ಹಾಗೂ ಜನರಿಗೆ ಅವರು ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.