ಈತ ಟೀ ಕುಡಿಯಲು ಬಂದಾಗ ಜನ ಬೆದರಿದ್ರು!! ಆತನ ಕೈನಲ್ಲಿದ್ದನ್ನು ನೋಡಿದ್ರೆ ನೀವೂ ಒಮ್ಮೆ ಬೆಚ್ಚಿ ಬೀಳ್ತೀರಿ!!

ನಾಯಿ ಕರ್ಕೊಂಡು ವಾಕಿಂಗ್​ ಹೋಗೋರನ್ನು ನೋಡಿರ್ತಿರಾ ಆದರೇ ವಿಷ ಕಕ್ಕುವ ಹಾವಿನ ಜೊತೆ ಟೀ ಕುಡಿಯಲು ಬಂದ ಭೂಪನನ್ನು ನೋಡಿದ್ದೀರಾ. ವಿಜಯಪುರದಲ್ಲೊಬ್ಬ ಯುವಕ ಜೀವಂತ ಹಾವಿನ ಸಮೇತ ಟೀ ಕುಡಿಯಲು ಬಂದು ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾನೆ.

ಶೇಖರ್​ ರಜಪೂತ್ ಎಂಬಾತನೇ ಹೀಗೆ ಆತಂಕ ಮೂಡಿಸಿದ ವ್ಯಕ್ತಿ. ಶೇಖರ್ ರಜಪೂತ್ ಮನೆಯೊಂದರಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಹಿಡಿಯಲು ಹೋಗಿದ್ದ. ಹೀಗೆ ಹಾವು ಹಿಡಿದ ಶೇಖರ್​ ಅದನ್ನು ಕೈಯಲ್ಲೇ ಹಿಡಿದುಕೊಂಡು ಟೀ ಕುಡಿಯಲು ಬಂದಿದ್ದಾನೆ.

ಶೇಖರ್ ಹಾವು ಹಿಡಿದುಕೊಂಡೇ ಟೀ ಕುಡಿಯಲು ಬಂದಿದ್ದು ನೋಡಿ ಜನರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ ಅಂಗಡಿ ಮಾಲೀಕನು ಬೆಚ್ಚಿ ಬಿದ್ದಿದ್ದಾನೆ. ಶೇಖರ್​ ಹಾವು ಹಿಡಿಯುವ ಕೆಲಸ ಮಾಡುತ್ತಿದ್ದರಿಂದ ಹಾವನ್ನೇ ಹಿಡಿದುಕೊಂಡು ಟೀ ಕುಡಿಯಲು ಬಂದಿದ್ದಾನೆ. ಇದು ನೋಡುಗರ ಅಚ್ಚರಿಗೆ ಕಾರಣವಾಯ್ತು.