ಕುಟುಂಬ ರಾಜಕಾರಣ ವಿರುದ್ಧ, ದೇಶದ ಪರ ನನ್ನ ಹೋರಾಟ – ಮಾಜಿ ಸಚಿವ ಎ.ಮಂಜು

ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ರಾಜ್ಯದಲ್ಲಿ ಪಕ್ಷ ಪರ್ಯಟನೆ ಜೋರಾಗಿದೆ. ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಹೆಸರು ಘೋಷಿಸುತ್ತಿದ್ದಂತೆ ಕಾಂಗ್ರೆಸ್ ಮಾಜಿ ಸಚಿವ ಎ. ಮಂಜು ಸಿಡಿದೆದ್ದಿದ್ದಾರೆ.

ದೋಸ್ತಿ ವಿರುದ್ಧ ಕೆಂಡಾಮಂಡಲರಾಗಿರೋ ಮಂಜು. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ನಿವಾಸಕ್ಕೆ ಭೇಟಿ ನೀಡಿದ ಮಂಜು, ಸ್ಥಳೀಯ ಮುಖಂಡರ ಜತೆ ಪ್ರೀತಂಗೌಡ-ಮಂಜು ಮಾತುಕತೆ ನಡೆಸಿದ್ರು.


ಬಳಿಕ ಮಾತನಾಡಿದ ಎ.ಮಂಜು, ಸೋಮವಾರ ತಮ್ಮ ಅಂತಿಮ ನಿಲುವು ಘೋಷಣೆ ಮಾಡುತ್ತೇನೆ ಎಂದಿದ್ದಾರೆ. ಈಗಾಗ್ಲೇ 2 ತಾಲೂಕಿನಲ್ಲಿ ಬೆಂಬಲಿಗ ಸಭೆ ನಡೆಸಿದ್ದು, ಇನ್ನೂ 4ತಾಲೂಕಿನಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳೋದಾಗಿ ಹೇಳಿದ್ರು. ಇದೇ ವೇಳೆ ಕುಟುಂಬ ರಾಜಕಾರಣ ವಿರುದ್ಧ ಮಾತನಾಡಿದ ಮಂಜು ದೇವೇಗೌಡರ ಕುಟುಂಬ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು.