ದೇವೆಗೌಡರು ನನ್ನ ಹಂಗಿನಲ್ಲಿದ್ದಾರೆ-ನಾನು ಅವರ ಹಂಗಿನಲ್ಲಿಲ್ಲ- ಡಬ್ಬಲ್ ಡಿಗ್ರಿ ಪಡೆದು ಮಂತ್ರಿಯಾದವನು ನಾನು- ಎಚ್​ಡಿಡಿ ವಿರುದ್ಧ ಎ.ಮಂಜು ವಾಗ್ದಾಳಿ

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ ಸಧ್ಯಕ್ಕೆ ತಣ್ಣಗಾಗುವ ಲಕ್ಷಣವಿಲ್ಲ.

ad


ಹೌದು ರೋಹಿಣಿ ಸಿಂಧೂರಿ ವರ್ಗಾವಣೆ ವಿರೋಧಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ್​​ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಇದೀಗ ಮಾಜಿ ಪ್ರಧಾನಿ ದೇವೆಗೌಡರ್​​ ವಿರುದ್ಧ ಸಚಿವ ಎ.ಮಂಜು ಕಿಡಿಕಾರಿದ್ದು, ದೇವೆಗೌಡರಿಗೆ ವಯಸ್ಸಾಗಿದೆ. ಅದಕ್ಕೆ ಏನೇನೋ ಮಾತಾಡ್ತಾರೆ. ನಾನು ಡಬ್ಬಲ್​ ಡಿಗ್ರಿ ಪಡೆದುಕೊಂಡು ಸಚಿವನಾಗಿದ್ದೇನೆ. ಅವರ ತರ 7 ನೇ ತರಗತಿಯಲ್ಲಿ 7 ಸಾರಿ ಫೇಲ್​ ಆಗಿ ಯಾರದ್ದೋ ಕೃಪಾಕಟಾಕ್ಷದಿಂದ ಮಂತ್ರಿಯಾಗಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಗುಡುಗಿದ ಸಚಿವ ಎ.ಮಂಜು ದೇವೇಗೌಡರು ಯಾರ ಸಹಾಯದಿಂದ ಸಂಸದರಾದ್ರು ಅಂತಾ ಹೇಳಲಿ. ಅವರು ಸೋತು ಮನೆಯಲ್ಲಿ ಕುಳಿತಿದ್ದಾಗ ನನ್ ಹತ್ರ ಸಹಾಯ ಕೇಳ್ಕೊಂಡು ಬಂದ್ರು. ದೇವೇಗೌಡರಿಗೆ ಪಿಎಂ ಕುರ್ಚಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇವೇಗೌಡರು ವಯಸ್ಸಿಗೆ ತಕ್ಕಂಗೆ ಮಾತನಾಡಲಿ.

ಅವರು ಮಕ್ಕಳ ವ್ಯಾಮೋಹ ಮೊದಲು ಬಿಡಲಿ ಏಕೆ ಡಿಸಿ ಬದಲಾವಣೆ ಮಾಡಿದ್ರು ಅನ್ನೋದನ್ನ ಕೆಲವೇ ದಿನದಲ್ಲಿ ಬಹಿರಂಗಪಡಿಸ್ತೀನಿ. ನಾನು ಅವರ ಹಂಗಲ್ಲಿ ಇಲ್ಲ, ನನ್ನ ಹಂಗಲ್ಲಿ ಅವರು ಇದ್ದಾರೆ ಎಂದು ದೇವೇಗೌಡರ ಆರೋಪಕ್ಕೆ ಎ ಮಂಜು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ದೇವೆಗೌಡರ್ ಪುತ್ರ ವಾತ್ಸಲ್ಯವನ್ನು ಟೀಕಿಸಿದ ಎ.ಮಂಜು, ತಮ್ಮ ಮಕ್ಕಳು ಮಾತ್ರ ಮಂತ್ರಿಗಳಾಗಿರಬೇಕು. ಅವರು ಮಾತ್ರ ಗೌಡರು .ಮಿಕ್ಕವರು ಅಲ್ವಾ ? ದೇವೆಗೌಡರು ಎಷ್ಟು ಅಧಿಕಾರಿಗಳ ವರ್ಗಾವಣೆಗೆ ಪತ್ರ ಬರೆದಿದ್ದಾರೆ ಗೊತ್ತಾ? ಎಂದು ಎ ಮಂಜು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ವರ್ಗಾವಣೆ ಗೌಡ್ರು ಮತ್ತು ಎ.ಮಂಜು ನಡುವಿನ ವಾಗ್ವಾದಕ್ಕೆ ಕಾರಣವಾಗಿದ್ದು, ಈ ವಿವಾದ ಎಲ್ಲಿಗೆ ತಲುಪತ್ತೋ ಕಾದುನೋಡಬೇಕಿದೆ.