ಮಕ್ಕಳ ಕಳ್ಳರು ವದಂತಿಗೆ ರಾಜಧಾನಿಯಲ್ಲಿ ಓರ್ವ ಬಲಿ- ಬ್ಯಾಟ್​​​-ಕಟ್ಟಿಗೆಯಿಂದ ಹೊಡೆದು ಕೊಂದ ಜನರು!

 

ad


ತುಮಕೂರಿನಲ್ಲಿ ಆರಂಭವಾಗಿದ್ದ ಮಕ್ಕಳ ಕಳ್ಳರ ಶಂಕೆ ಈಡಿ ರಾಜ್ಯವನ್ನೇ ಸಮೂಹ ಸನ್ನಿಯಂತೆ ಆವರಿಸಿದ್ದು, ರಾಜ್ಯ ರಾಜಧಾನಿಯಲ್ಲಿ ಈ ವದಂತಿಯ ಸೃಷ್ಟಿಸಿದ ಕ್ರೌರ್ಯಕ್ಕೆ ಅಮಾಯಕನೊರ್ವ ಬಲಿಯಾಗಿದ್ದಾನೆ. ಚಾಮರಾಜಪೇಟೆಯಲ್ಲಿ ಘಟನೆ ನಡೆದಿದ್ದು, ಕಾಲೂರಾಮ್ ಮೃತ ದುರ್ದೈವಿ.

 

ನಿನ್ನೆ ಚಾಮರಾಜಪೇಟೆ ಬಳಿ ಕಾಲೂರಾಮ್​ ಎಂಬಾತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಎನ್ನಲಾಗಿದೆ. ಈತನನ್ನು ಮಕ್ಕಳ ಕಳ್ಳ ಎಂದು ಭಾವಿಸಿದ ಸ್ಥಳೀಯರು ಆತನ ಮೇಲೆ ಬ್ಯಾಟ್​ನಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಕಾಲೂರಾಮ್, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಕಾಲೂರಾಮ್​ ಮಕ್ಕಳ ಕಳ್ಳನಾಗಿರಲಿಲ್ಲ. ಬದಲಾಗಿ ರಾಜಸ್ಥಾನ ಮೂಲದವನಾಗಿದ್ದು, ನಗರದಲ್ಲಿ ಅಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ನಿನ್ನೆ ಚಾಮರಾಜಪೇಟೆಯ ಅನಂತಪುರದಲ್ಲಿ ಈತನನ್ನು ತಪ್ಪಾಗಿ ಭಾವಿಸಿದ ಸ್ಥಳೀಯರು ಬ್ಯಾಟ್​,ದೊಣ್ಣೆ ಹಾಗೂ ಸ್ಟಿಕ್​ನಿಂದ ಹಲ್ಲೆ ಮಾಡಿದ್ದರು. ಸ್ಥಳೀಯರು ಹಲ್ಲೆ ಮಾಡಿದ್ದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಕಾಲೂರಾಮ್​ನನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ಕಿರಣ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ. ಸ್ಥಳೀಯರು ಹಲ್ಲೆ ಮಾಡುವ ವಿಶ್ಯುವಲ್ಸ್ ಆಧರಿಸಿ ಪೊಲೀಸರು ಕೆಲವರನ್ನು ಬಂಧಿಸಿದ್ದು, ಬಂಧಿತರ ಕುಟುಂಬಸ್ಥರು ಇದೀಗ ಪೊಲೀಸರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.