ಕಾಡುಪ್ರಾಣಿಯನ್ನೇ ನುಂಗಿದ ಬೃಹತ್ ಗಾತ್ರದ ಹೆಬ್ಬಾವು. ಯಾವುದು ಆ ಕಾಡು ಪ್ರಾಣಿ? ಅಮೇಲೆ ಹೊರಗೆ ಬಂದಿದ್ದೇಗೆ?

ಉರಗ ಸಂತತಿಯಲ್ಲೇ ಹೆಬ್ಬಾವು ಅತೀ ಸೂಕ್ಷ್ಮ. ಹೆಚ್ಚಾಗಿ ದಟ್ಟ ಕಾನನದ ಮಧ್ಯೆಯೇ ವಾಸಿಸೋ ಹೆಬ್ಬಾವು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳೋದು ತೀರಾ ವಿರಳ. ಅಂತಹ ಪ್ರಾಣಿ ಕಾಡಂಚಿನ ಕಾಫಿತೋಟದ ಬಳಿ ಬಂದು ಕಾಡು ಕುರಿಯನ್ನ ನುಂಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ನಡೆದಿದೆ.

ಅರ್ಧ ಕಾಡು ಕುರಿಯನ್ನ ನುಂಗಿದ್ದ ಬೃಹತ್ ಗಾತ್ರದ ಹೆಬ್ಬಾವು ತೆವಳಲಾಗದೆ ಕಾಡಂಚಿನ ಕಾಫಿತೋಟದ ಬಳಿ ಬಿದ್ದಿತ್ತು. ಕೆಲಸ ಮುಗಿಸಿ ಬರ್ತಿದ್ದ ಕಾಫಿ ತೋಟದ ಕಾರ್ಮಿಕರು ಹೆಬ್ಬಾವನ್ನ ಕಂಡು ನಿಟ್ಟುಸಿರು ಬಿಟ್ಟು ಕೂಗಾಡಿದ್ದಾರೆ. ಹಾವನ್ನ ಕಂಡ ತೋಟದ ಮಾಲೀಕ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಮೂಡಿಗೆರೆ ರೇಂಜ್ ನ ಅರಣ್ಯಾಧಿಕಾರಿಗಳು ಹಾಗೂ ಉರಗ ತಜ್ಞ ಸ್ನೇಕ್ ಆರೀಫ್ ಮಲೆನಾಡಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಹೆಬ್ಬಾವನ್ನ ರಕ್ಷಿಸಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಆದ್ರೆ, ಅರ್ಧ ಹೆಬ್ಬಾವಿನ ಬಾಯಿಗೆ ತುತ್ತಾಗಿದ್ದ ಕಾಡು ಕುರಿ ಹಾವಿನ ಬಾಯಿಂದ ಹೊರಬರುವಷ್ಟರಲ್ಲೇ ಸತ್ತು ಹೋಗಿತ್ತು.