ಬಾದಾಮಿಯಲ್ಲಿ ನಿರ್ಮಾಣವಾಗ್ತಿದೆ ಸಿದ್ದರಾಮಯ್ಯನವರಿಗೆ ಸುಸಜ್ಜಿತ ಮನೆ. ಹಾಗಾದ್ರೆ ಸಿದ್ದು ಬಾದಾಮಿಯಲ್ಲೇ ಖಾಯಂ ಉಳಿತಾರಾ? ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರದಲ್ಲಿ ಶಾಸಕರಾದ ಬಳಿಕ,ಬಾದಾಮಿ ಯಲ್ಲಿ ಮನೆ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು.ಈಗ ಅಂತಿಮಗೊಂಡಿದ್ದು, ಸಿದ್ದರಾಮಯ್ಯ ವಾಸ ಮಾಡುವುದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಆಗುತ್ತಿದೆ. ಬಾಡಿಗೆ ಮನೆ ಯೋ ಅಥವಾ ಸ್ವಂತ ಮನೆಯೋ ಎಂಬುವ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಲೋಕೋಪಯೋಗಿ ಇಲಾಖೆಯ ವಸತಿ ನಿಲಯವೊಂದು ಪೈನಲ್ ಮಾಡಲಾಗಿದೆ.

 

ಹಳೇ ಕಟ್ಟಡ ಇದ್ದ ಪರಿಣಾಮ ಈಗ ನವೀಕರಣ ಕಾರ್ಯ ನಡೆದಿದ್ದು, ಮನೆಯ ಮೇಲೆ ಕಾಂಕ್ರೀಟ್ ಹಾಕುವ ಕಾರ್ಯ ಮತ್ತು ಒಳಗೆ ನೂತನ ಟೈಲ್ಸ್  ಹಾಕುವ ಜೊತೆಗೆ ಸಭೆ ನಡೆಸುವುದಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ತಿಂಗಳಗೆ ಒಮ್ಮೆ ಭೇಟಿ ನೀಡಿ, ಎರಡು ರಿಂದ ಮೂರು ದಿನ ವಾಸ್ತವ್ಯ ಇರುವ ಸಿದ್ದರಾಮಯ್ಯ ಅವರಿಗಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.ಇತ್ತೀಚೆಗೆ ಬಂದಾಗ ಕೃಷ್ಣ ಹೇರಟೇಜ್ ದಲ್ಲಿ ವಾಸ್ತವ್ಯ ಇದ್ದು,ಜನತೆಯ ಸಂಪರ್ಕ ಕ್ಕೆ ಸಿಗುತ್ತಿರಲ್ಲಿಲ್ಲ.

ಹೀಗಾಗಿ ಸಾರ್ವಜನಿಕ ಸಂಪರ್ಕ ಸಭೆ ಮನೆ ಮಾಡುವ ಬಗ್ಗೆ ಬಹಿರಂಗ ವಾಗಿಯೇ ಸಿದ್ದರಾಮಯ್ಯನವರು ಹೇಳಿದ್ದರು,ಬಾಡಿಗೆಗೆ ಮನೆಯ ಮಾಡುವುದಾಗಿ ತಿಳಿಸಿದ್ದರು.ಆದರೆ ಕೆಲ ಮುಖಂಡರು, ತಾವೇ ಮನೆ ನೋಡಿ ಬಾಡಗಿ ಬೇಡಾ ಹಾಗೆ ಇರಿ.ಎಂದು ತಿಳಿಸಿದ್ದರು. ಯಾರ ಮುಖಂಡರ ಮನೆ ಬೇಡಾ,ಲೋಕೋಪಯೋಗಿ ಇಲಾಖೆ ಕ್ವಾಟರ್ಸ ನಲ್ಲಿ ಉಳಿಯುವ ಬಗ್ಗೆ ಅಂತಿಮಗೊಳಿಸಿದ್ದರು.ಹೀಗಾಗಿ ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಸ್ತವ್ಯ ಕ್ಕೆ ಮನೆಯೊಂದು ರೆಡಿ ಆಗುತ್ತಿದೆ.ಇಲ್ಲಿಗೆ ಬಂದ ಮೇಲೆ ಸಿದ್ದರಾಮಯ್ಯ ನವರು ಸಾರ್ವಜನಿಕ ರಿಗೆ ಸರಳವಾಗಿ ಸಿಗುವವರೆ ಎಂಬುದು ಕಾಯ್ದು ನೋಡಬೇಕಾಗಿದೆ…