ಸಾಯುವ ಮೊದಲು ನಡೆದಿದ್ದನ್ನು ಹೇಳಿದ ಆ ವಿದ್ಯಾರ್ಥಿ!! ವಿದ್ಯಾರ್ಥಿ ಹೇಳಿದ ಆ ವಿಷಯವೇನು?

ಎರಡು ಕುಟುಂಬದ ಜಮೀನು ವಿವಾದದ ದ್ವೇಷಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನು ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯ ಚನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.  2 ದಿನಗಳ ಹಿಂದೆ ನಗರದ ಎಟಿಎನ್ಸಿ ಕಾಲೇಜಿನಲ್ಲಿ ಪರೀಕ್ಷೆ ಬರೆದು ವಾಪಸ್ ಆಗುವ ವೇಳೆ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ವಿಷ ಪ್ರಾಶನ ಬಲವಂತವಾಗಿ ಮಾಡಿಸಲಾಗಿದೆ.

ad


ಕಾರಿನಲ್ಲಿಯೇ ವಿಷ ಕುಡಿಸಿದ ನಂತರ ವಿದ್ಯಾನಗರದ ರೇಲ್ವೆ ಟ್ರಾಕ್ ಬಳಿ ಎಸೆದು ಹೋಗಿದ್ದರು. ಸ್ಥಳೀಯರ ಸಹಕಾರದಿಂದ ಆಸ್ಪತ್ರೆ ಸೇರಿದ್ದ ಅಭಿಷೇಕ್ ಸಾಯುವ ಮುನ್ನ ಪೊಲೀಸರಿಗೆ ಅಸಲಿ ವಿಷ್ಯ ಬಾಯ್ಬಿಟ್ಟಿದ್ದಾನೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಆತ ಕೊನೆಯುಸಿರುವ ಎಳೆದಿದ್ದಾನೆ. ರಾಜಾ ನಾಯಕ್ ಮತ್ತು ಮೆಗ್ಯಾ ನಾಯಕ್ ಇಬ್ಬರ ನಡುವೆ ಮೊದಲಿನಿಂದಲೂ ಜಮೀನು ಜಗಳವಿತ್ತು.

ಒಂದು ವರ್ಷದ ಹಿಂದೆಯೂ ಬೀದಿಯಲ್ಲಿ ಬಡಿದಾಡಿಕೊಂಡಿದ್ದರು. ಇದೀಗ ರಾಜಾ ನಾಯಕ್ ಮಗ ಅಭಿಷೇಕ್ ಈ ಜಗಳಕ್ಕೆ ಬಲಿಯಾಗಿದ್ದಾನೆ. ಮೆಗ್ಯಾ ನಾಯಕ್ ಸಹೋದರ ಒಬ್ಯಾ ನಾಯ್ಕ್, ಪಾಪ ನಾಯಕ್, ನಿರ್ಮಾಲಾ ಬಾಯಿ, ಗೀತಾ ಬಾಯಿ ವಿಷ ಪ್ರಾಶನ ಮಾಡಿಸಿದ ಆರೋಪ ಹೊತ್ತುಕೊಂಡಿದ್ದಾರೆ. ಸದ್ಯ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಬ್ಯಾ ನಾಯ್ಕ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮಗನ್ನು ಕಳೆದುಕೊಂಡ ದುಃಖದಲ್ಲಿ ಪೋಷಕರು ಕಣ್ಣೀರು ಇಡುತ್ತಿದ್ದಾರೆ.

 

ವರದಿ: ಯೋಗೇಶ್ ಬಿಟಿವಿ ಶಿವಮೊಗ್ಗ