CCTV ಕಂಡು ಬೆದರಿದ ಮೊಬೈಲ್ ಕಳ್ಳ ಮಾಡಿದ್ದೇನು ಗೊತ್ತಾ?

ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಕದ್ದ ಕಳ್ಳನೊಬ್ಬ ಸಿಸಿಟಿವಿ ಕಂಡು ಗಲಿಬಿಲಿಯಾಗಿದ್ದಾನೆ. ಬಳಿಕ ಕದ್ದ ಮೊಬೈಲನ್ನ ವಾಪಸ್​​ ಅಂಗಡಿಗೇ ಕೊಟ್ಟು ಎಸ್ಕೇಪ್​ ಆಗಿರೋ ಘಟನೆ ರಾಮನಗರದಲ್ಲಿ ನಡೆದಿದೆ. ಚನ್ನಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮೊಬೈಲ್ ಅಂಗಡಿಗೆ ಮೊಬೈಲ್ ರಿಪೇರಿ ಮಾಡಿಸಲು ಇಬ್ಬರು ಯುವಕರು ಬಂದಿದ್ರು. ಓರ್ವ ಅಂಗಡಿ ಮಾಲೀಕನ ಬಳಿ ಮೊಬೈಲ್ ರಿಪೇರಿ ಮಾಡಿಸ್ತಿದ್ರೆ, ಮತ್ತೊಬ್ಬ ಮೊಬೈಲ್​ಗಳನ್ನಿಟ್ಟಿರುವ ಜಾಗದ ಕಡೆ ಕಣ್ಣು ಹಾಯಿಸುತ್ತಿದ್ದ‌.

ಅತ್ತ ಇತ್ತ ನೋಡಿದ ಆತ ಮೊಬೈಲ್ ಒಂದನ್ನ ಕದ್ದು ತನ್ನ ಜೇಬಿಗೆ ಇರಿಸಿದ್ದ. ತದನಂತರ ಸುತ್ತಮುತ್ತ ಕಣ್ಣು ಹಾಯಿಸಿದ್ದ ಅಲ್ಲಿ ಸಿಸಿಟಿವಿ ಇರೋದನ್ನ ನೋಡಿ ಗಲಿಬಿಲಿಗೊಂಡವನೇ ಅಲ್ಲಿಂದ ಎಸ್ಕೇಪ್ ಆಗಿದ್ದ. ಸ್ವಲ್ಪ ಸಮಯದ ನಂತರ ಅದೇನ್ ಆಯ್ತೊ ಗೊತ್ತಿಲ್ಲ ಮತ್ತೆ ವಾಪಸ್ ಬಂದು ಅಂಗಡಿ ಮಾಲೀಕನಿಗೆ ಮೊಬೈಲ್ ವಾಪಸ್ ಮಾಡಿ.

ಇಬ್ಬರು ಜಾಗ ಖಾಲಿಮಾಡಿದ್ರು‌. ಈ ಎಲ್ಲಾ ದೃಶ್ಯಗಳು ಮೊಬೈಲ್ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ‌. ಈ ಸಂಬಂಧ ಅಂಗಡಿ ಮಾಲೀಕ ಸಿಸಿಟಿವಿ ದೃಶ್ಯಾವಳಿಗಳ ಸಮೇತ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Avail Great Discounts on Amazon Today click here