ಯುವತಿ ಕೈಲಿ ಶೇವ್ ಮಾಡಿಸಿಕೊಂಡ ಮಾಸ್ಟರ್ ಬ್ಲಾಸ್ಟರ್..!!

ಮಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ನಂತರ ಸದ್ಯ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಯುವತಿಯಿಂದ ತಮಗೆ ಶೇವ್ ಮಾಡಿಸಿಕೊಂಡಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.

ad

ಕ್ರಿಕೆಟ್ ನಿವೃತ್ತಿ ಪಡೆದ ನಂತರ ಕ್ರಿಕೆಟ್ ದೇವರು ಎಂದೆ ಹೆಸರು ಪಡೆದಿರುವ ಸಚಿನ್ ತೆಂಡೂಲ್ಕರ್ ಯುವಕರಿಗೆ ಫಿಟ್​ನೆಸ್​, ಆರೋಗ್ಯ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಅಲ್ಲದೆ ತಮ್ಮದೆ ಹಾದಿಯಲ್ಲಿ ಸಾಗುತ್ತಿರುವ ಸಚ್ಚಿನ್ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಯುವ ಜನತೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ .

ಸದ್ಯ ಉತ್ತರ ಪ್ರದೇಶದ ನೇಹಾ, ಜ್ಯೋತಿ ಎಂಬ ಯುವತಿಯರು ನಡೆಸುತ್ತಿರುವ ಹೇರ್​ ಸಲೂನ್​ಗೆ ಆಗಮಿಸಿದ ಸಚಿನ್ ತೆಂಡೂಲ್ಕರ್ ರವರು ಯುವತಿಯಿಂದ ಶೇವ್ ಮಾಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಕ್ಷೌರ ಮಾಡಿಸಿಕೊಳ್ಳುವುದು ಹುಡುಗರ ಹತ್ತಿರ ಆದರೆ ಕ್ರಿಕೆಟ್ ದೇವರು ಸಚಿನ್ ತಾನು ಒಬ್ಬ ಸೆಲೆಬ್ರೆಟಿ ಎನ್ನುವುದನ್ನು ಲೆಕ್ಕಿಸದೆ, ಸಣ್ಣದೊಂದು ಸಲೂನ್ ಶಾಪ್ ಗೆ ತೆರಳಿ ಅದು ಯುವತಿಯ ಕೈನಲ್ಲಿ ತಮ್ಮ ಗಡ್ಡ ಶೇವ್ ಮಾಡಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಬನ್ವಾರಿ ತೊಲೊ ಎನ್ನುವ ಊರಿನಲ್ಲಿರುವ ನೇಹಾ, ಜ್ಯೋತಿ ಎಂಬ ಅಕ್ಕ ತಂಗಿಯರು ಮೊದಲಿಗೆ ಅಪ್ಪನಿಗೆ ಸಹಾಯವಾಗಲು ಕ್ಷೌರ ಮಾಡುವುದನ್ನ ಕಲಿತುಕೊಂಡರು. ಆದರೆ ಕ್ರಮೇಣ ಇದೇ ಇವರಿಗೆ ಜೀವನಧಾರವಾಗಿದೆ.

ಈ ಸಲೂನ್ ಗೆ ತೆರಳಿದ ಸಚಿನ್ ಸದ್ಯ ನೇಹಾ, ಜ್ಯೋತಿ ಎಂಬ ಯುವತಿಯರು ನಡೆಸುತ್ತಿರುವ ಹೇರ್​ ಸಲೂನ್​ನಲ್ಲಿ ಗಡ್ಡ ತೆಗೆಸಿಕೊಂಡಿದ್ದಾರೆ.ಈ ಬಗ್ಗೆ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ,ನಾನು ಈವರೆಗು ಬೇರೊಬ್ಬರಿಂದ ಶೇವ್ ಮಾಡಿಸಿಕೊಂಡಿರಲಿಲ್ಲ . ಆದರೆ ಆ ದಾಖಲೆಯನ್ನು ಇಂದು ಬ್ರೇಕ್ ಮಾಡಿದ್ದೇನೆ . ಈ ಬಾರ್ಬರ್​ಶಾಪ್​ ಹಡುಗಿಯರನ್ನು ಭೇಟಿಯಾಗಿ, ಸ್ಕಾಲರ್​ಶಿಪ್ ವಿತರಿಸಿದ್ದು ನನ್ನ ಭಾಗ್ಯ ಎಂದು ಸಚಿನ್ ಬರೆದುಕೊಳ್ಳುವುದರ ಜೊತೆಗೆ ತಮ್ಮ ಇನ್ಸ್​ಟಾಗ್ರಾಮ್ ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

ಅಲ್ಲದೆ ಪುರುಷ ಕೇಂದ್ರಿತ ವೃತ್ತಿಯಲ್ಲಿ ಈ ಅಕ್ಕತಂಗಿಯರ ಕಾರ್ಯದ ಬಗ್ಗೆ ತಿಳಿದ, ಜಿಲ್ಲೆಟ್​ ಶೇವಿಂಗ್ ಬ್ಲೇಡ್ ಕಂಪನಿ ಇವರನ್ನ ಇಟ್ಟುಕೊಂಡು ಜಾಹೀರಾತವೊಂದನ್ನ ತಯಾರಿಸಿತು. ಈ ಜಾಹೀರಾತು ಇತ್ತೀಚೆಗೆ ಬಾರ್ಬರ್​ ಗರ್ಲ್ಸ್​ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.