ಕಲ್ಲಡ್ಕ ಪ್ರಭಾಕರ ಭಟ್ ಭಯೋತ್ಪಾದಕರಂತೆ !! ಸಾಮಾಜಿಕ ಜಾಲತಾಣದಲ್ಲಿ ಆರ್ ಎಸ್ ಎಸ್ ಮುಖಂಡರ ಅವಹೇಳನ !!

ಕಲ್ಲಡ್ಕ ಪ್ರಭಾಕರನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡುವ ರೀತಿಯಲ್ಲಿ ಬಿಂಬಿಸಲಾಗಿದೆ.

ಕಲ್ಲಡ್ಕದಲ್ಲಿ ಮುದುಕ ಭಯೋತ್ಪಾದಕ ಇಜಿಡಾ ಭಟ್ಟನಿಂದ ಪ್ಯಾಂಟ್​ ಟ್ರೈನಿಂಗ್​ ಮಾಡಿಸಿ ಮಂಗನಿಂದ ಮಾನವ ಆಗುವುದನ್ನು ಕಲ್ಲಡ್ಕ ಸಾಬೀತು ಪಡಿಸಿದ್ದಾರೆ ಎಂದು ಭಟ್ಟರ ವಿರುದ್ಧ ಪೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಲಾಗಿದೆ. ಅಷ್ಟೇ ಅಲ್ಲದೆ ಅಯ್ಯಯ್ಯೋ ಭಯೋತ್ಪಾದಕ ಮುದುಕ ಭಟ್ಟಾ ಎಂದು ಬರೆಯಲಾಗಿದೆ. ಮಂಗನಿಂದ ಮಾನವ ಆಗುವುದನ್ನು ಕಲ್ಲಡ್ಕರಿಂದ ನೋಡಿ ಕಲಿಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗುತ್ತಿದೆ.

ಆರ್ ಎಸ್ ಎಸ್ ಪ್ರಮುಖ ಮುಖಂಡರಾಗಿರುವ ಕಲ್ಲಡ್ಕ ಪ್ರಭಾಕರ ಭಟ್, ತಮ್ಮ ಪ್ರಖರ ಮಾತುಗಳಿಂದ ಖ್ಯಾತಿ ಪಡೆದವರು. ಹಿಂದುತ್ವವಾದಿಗಳ ಮಧ್ಯೆ ಅಭಿಮಾನಿಗಳನ್ನು ಹೊಂದಿರುವ ಕಲ್ಲಡ್ಕ ಪ್ರಭಾಕರ ಭಟ್, ಮುಸ್ಲೀಮರು, ಪ್ರಗತಿಪರರು, ಕಾಂಗ್ರೆಸ್ಸಿಗರ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಕರಾವಳಿಯಲ್ಲಿ ನಡೆಯುವ ಎಲ್ಲಾ ಕೋಮುಗಲಭೆ ಗಳಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಪಾತ್ರವಿದೆ ಎಂಬ ಆರೋಪಗಳು ಸದಾ ಕಾಲಕ್ಕೆ ಬರುತ್ತಿರುತ್ತದೆ. ಹಿಂದುತ್ವ ಪ್ರತಿಪಾದಕ ಕಲ್ಲಡ್ಕ ಪ್ರಭಾಕರ್ ಭಟ್ ಇಂತಹ ಆರೋಪಗಳಿಗೆ ಸೊಪ್ಪುಹಾಕಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪ್ರಾರಂಭವಾಗಿದೆ.