“ಕಲಬುರಗಿಯಲ್ಲಿ ಭ್ರಷ್ಟ ಅಧಿಕಾರಿಗೆ ಎಸಿಬಿ ಶಾಕ್”

ಕಲಬುರಗಿ ನಗರದಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಯೋರ್ವನ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಕಿರಿಯ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಮಲಾಜಿಯವರ ಆಪ್ತ ಕಾರ್ಯದರ್ಶಿಯಾಗಿರುವ ದೇವೆಂದ್ರಪ್ಪ ಎಸ್ ಬಿರಾದರ್ ಎಸಿಬಿ ದಾಳಿಗೊಳಗಾದ ಅಧಿಕಾರಿ.. ನಗರದ ಜಯನಗರದಲ್ಲಿರುವ ನಿವಾಸ, ಹಳೆ ಎಸ್ಪಿ ಆಫಿಸ್ ಹಿಂದುಗಡೆ ಇರುವ ಕಚೇರಿ, ರಾಮ ಮಂದಿರ ಬಳಿಯಿರುವ ವಾಣಿಜ್ಯ ಸಂಕಿರ್ಣ, ಸೇರಿದಂತೆ ಒಟ್ಟು ನಾಲ್ಕು ಕಡೆ ಕಲಬುರಗಿ, ಯಾದಗಿರಿ ಹಾಗೂ ಬೀದರ್ ಎಸಿಬಿ ಅಧಿಕಾರಿಗಳ ತಂಡ ಏಕಕಾಲಕ್ಕೆ ಬೆಳಗ್ಗೆ ಆರು ಗಂಟೆಗೆ ದಾಳಿ ನಡೆಸಿದೆ.

adಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ಆರೋಪ ಹಿನ್ನಲೆಯಲ್ಲಿ ಕಲಬುರಗಿ ಎಸಿಬಿ ಡಿವೈಎಸ್ಪಿ ಜೇಮ್ಸ್ ಮಿನೇಜಸ್, ಸಿಪಿಐ ಮಹಾಂತೇಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಳಿಯ ಸಂದರ್ಭದಲ್ಲಿ ಅಧಿಕಾರಿ ದೇವೆಂದ್ರ ಎಸ್ ಬಿರಾದರ್ ಮನೆಯಲ್ಲಿಯೇ ಇದ್ದರು‌. ಇನ್ನು ಜಯನಗರದಲ್ಲಿನ ಮೂರಂತಸ್ತಿನ ಭವ್ಯ ಮನೆಯಲ್ಲಿ ಎಸಿಬಿ ಅಧಿಕಾರಿಗಳು ಬೆಳಗ್ಗೆಯಿಂದಲೇ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ..