ಉಪ್ಪು-ಹುಳಿ-ಖಾರದಲ್ಲಿ ಅಂಬರೀಶ್ ಡ್ಯಾನ್ಸ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಸದ್ದು ಮಾಡ್ತಿರುವ ಚಿತ್ರ ಉಪ್ಪು ಹುಳಿ ಖಾರ. ಮುಂದಿನ ವಾರ ತೆರೆಗೆ ಬರಲಿರುವ ಈ ‌ಚಿತ್ರ ಸಾಕಷ್ಟು ಕುತೂಹಲ‌ ಮೂಡಿಸಿದೆ.  ಚಿತ್ರ ಬಿಡುಗಡೆಯ ಕುರಿತು ಮಾಹಿತಿ‌ ನೀಡುವ ನಿಟ್ಟಿನಲ್ಲಿ ಈ ಚಿತ್ರ ತಂಡ ನಗರದ ಖಾಸಗಿ ಹೊಟೇಲ್ ನಲ್ಲಿ‌ ಸುದ್ದಿ ಗೋಷ್ಠಿ ನಡೆಸಿತು. ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ  ಹಿರಿಯ ನಟ ಹಾಗೂ ಶಾಸಕ ಅಂಬರೀಶ್ ನಟಿಯರ ಜೊತೆ ಡ್ಯಾನ್ಸ್ ಮಾಡಿ ಮನಸೆಳೆದರು.

ಉಪ್ಪು ಹುಳಿ ಖಾರ ಚಿತ್ರದ ಅನುಶ್ರೀ ಹಾಗೂ ಮಾಲಾಶ್ರೀ ಜೊತೆ ಅಂಬರೀಶ್ ಅವರು ಸಖತ್ತಾಗಿ ಸ್ಟೆಪ್ ಹಾಕಿ ಕುಣಿದರು. ಅಂಬರೀಶ್ ಡ್ಯಾನ್ಸ್ ಮಾಡುತ್ತಿದ್ದಂತೆ ಎಲ್ಲರೂ ವೇದಿಕೆ ಮೇಲೆ‌ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇರ್ಮಾನ ಸರ್ದಾರಿಯಾ ನಿರ್ದೇಶನದ ಈ ಚಿತ್ರ ಸಾಕಷ್ಟು ಹೆಸರು ಮಾಡಿದ್ದು ಬಾಕ್ಸಾಪೀಸ್ ನಲ್ಲಿ ಗೆಲ್ಲುವ ಭರವಸೆ ಮೂಡಿಸಿದೆ.