Actor Chetan Speech on Gauri Lankesh issue | ಗೌರಿ ಲಂಕೇಶ್​ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್​ ಪ್ರತಿಭಟನಾ ಸಮಾವೇಶ ನಡಿತಾ ಇದೆ.

0
253

ಗೌರಿ ಲಂಕೇಶ್​ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್​ ಪ್ರತಿಭಟನಾ ಸಮಾವೇಶ ನಡಿತಾ ಇದೆ. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಸಹಸ್ರಾರು ಮಂದಿ ಸಿಟಿ ರೈಲು ನಿಲ್ದಾಣದಿಂದ ಸೆಂಟ್ರಲ್​ ಕಾಲೇಜ್​ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ರು. ಪ್ರತಿರೋಧ ಸಮಾವೇಶಕ್ಕೆ ಹೊರ ರಾಜ್ಯಗಳಿಂದ್ಲೂ ಸಾಕಷ್ಟು ಮಂದಿ ಆಗಮಿಸಿದ್ದಾರೆ. ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೀತಾ ಇದ್ದು, ಸ್ವಾಮಿ ಅಗ್ನಿವೇಶ್, ತೀಸ್ತಾ ಸೆಟ್ಲವಾಡ್, ಜಿಗ್ನೇಶ್ ಮೇವಾನಿ, ಮೇಧಾ ಪಾಟ್ಕರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಗೌರಿ ಲಂಕೇಶ್​ತಾಯಿ ಇಂದಿರಾ, ಸಹೋದರಿ ಕವಿತಾ ಲಂಕೇಶ್​, ಸೇರಿದಂತೆ ಸ್ವಾಮೀಜಿಗಳು ಪಾಲ್ಗೊಂಡಿದ್ದಾರೆ. ಇಡಿ ಸೆಂಟ್ರಲ್ ಕಾಲೇಜು ಮೈದಾನ ಭರ್ತಿಯಾಗಿದ್ದು, ನಾನೂ ಗೌರಿ ನಾವೇಲ್ಲರೂ ಅನ್ನೊ ಘೋಷಣೆಗಳು ಮೊಳಗಿಸ್ತಿದಾರೆ.
==========

LEAVE A REPLY

Please enter your comment!
Please enter your name here