ಕ್ಯಾನ್ಸರ್​ ಪೀಡಿತ ಅಭಿಮಾನಿಗೆ ದರ್ಶನ್​ ಹೇಳಿದ್ದೇನು?

ಇನ್ನೇನು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್​ವುಡ್​ ಸುಲ್ತಾನ್​ ದರ್ಶನ್​ಗೆ ಅಭಿಮಾನಿಗಳೆಂದರೇ ಪಂಚಪ್ರಾಣ. ಯಾವ ಪ್ರಚಾರದ ಹಂಗಿಲ್ಲದೇ ದರ್ಶನ ಈಗಾಗಲೇ ಸಾಕಷ್ಟು ಅಭಿಮಾನಿಗಳ ಕುಟುಂಬಕ್ಕೆ ದರ್ಶನ ನೆರವಾಗಿದ್ದಾರೆ.

ಹೀಗೆ ಅಭಿಮಾನಿಗಳನ್ನು ಆರಾಧಿಸುವ ಸ್ಯಾಂಡಲ್​ವುಡ್​ ಸಾರಥಿ ದರ್ಶನ ಮತ್ತೊಮ್ಮೆ ತಮ್ಮ ಅಭಿಮಾನಿಗಳೆಡೆಗಿನ ಪ್ರೀತಿ ಪ್ರಕಟಿಸಿದ್ದಾರೆ. ಅದ್ಹೇಗೆ ಅಂದ್ರಾ ಈ ಸ್ಟೋರಿ ನೋಡಿ. ಪೋಟೋದಲ್ಲಿ ಹೀಗೆ ಹಾಸಿಗೆ ಹಿಡಿದು ಮಲಗಿರುವ ವ್ಯಕ್ತಿಯ ಹೆಸರು ರೇವಂತ್​​. ಈ ಚಾಲೆಂಜಿಂಗ್ ಸ್ಟಾರ್​ ದರ್ಶನ ಕಟ್ಟಾ ಅಭಿಮಾನಿ. ಸಾಕಷ್ಟು ಭಾರಿ ಡಿ.ಬಾಸ್​​​​ರವರ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಅವರು ಜೊತೆ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದ. ಆದರೇ ಇದೀಗ ರೇವಂತ್​ ಕ್ಯಾನ್ಸರ್​ಗೆ ತುತ್ತಾಗಿದ್ದು, ಕೊನೆಯ ದಿನಗಳನ್ನು ಎಣಿಸುತ್ತಿದ್ದಾನೆ.

 

 

ಹೀಗೆ ತನ್ನ ಅಭಿಮಾನಿ ರೇವಂತ್​ ಕ್ಯಾನ್ಸರ್​ನಿಂದ ಕೊನೆಯ ದಿನಗಳನ್ನು ಎಣಿಸುತ್ತಿರುವ ಮಾಹಿತಿ ಪಡೆದ ದಚ್ಚು ದರ್ಶನ್​ ತಮ್ಮ ಬ್ಯುಸಿ ಶೆಡ್ಯೂಲ್​ ಮಧ್ಯದಲ್ಲೂ ವಿಡಿಯೋ ಕಾಲ್​ ಮಾಡಿ ಮಾತನಾಡಿದ್ದಾರೆ. ರೇವಂತ್​​ಗೆ ಧೈರ್ಯ ತುಂಬಿದ ದರ್ಶನ್​ ಅವರ ಕುಟುಂಬಸ್ಥರಿಗೂ ಸಾಂತ್ವನ ಹೇಳಿದ್ದಾರೆ. ಇದು ದರ್ಶನ ಮಾನವೀಯ ಮುಖ ಹಾಗೂ ಅಭಿಮಾನಿಗಳೆಡೆಗಿನ ಪ್ರೀತಿಗೆ ಸಾಕ್ಷಿ.