ದೇವೇಗೌಡರ ಮಿಮಿಕ್ರಿ ಮಾಡಿದ ಜಗ್ಗೇಶ್ ! ಸಿಎಂ ಸಿದ್ದರಾಮಯ್ಯ ಬಗ್ಗೆ ನವರಸ ನಾಯಕ ಹೇಳಿದ್ದೇನು ?

ತುಮಕೂರಿನಲ್ಲಿ ಬಿಜೆಪಿ ಪರಿವರ್ತನಾ ರ‌್ಯಾಲಿಯಲ್ಲಿ ಮಾತನಾಡಿದ ನಟ ಜಗ್ಗೇಶ್ ಸಿಎಂ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯರದ್ದು ಭ್ರಷ್ಟ ಸರಕಾರ ಅನ್ನುವಂತದ್ದನ್ನು ನಿನ್ನೆ ಮೊನ್ನೆ ಆಟವಾಡುವ ಮಕ್ಕಳೂ ಹೇಳುತ್ತಾರೆ ಎಂದು ವ್ಯಂಗ್ಯವಾಡಿದ ಜಗ್ಗೇಶ್, ಈ ಬಾರಿ ಬಿ ಎಸ್ ಯಡಿಯೂರಪ್ಪ ಸಿಎಂ ಪಟ್ಟಕ್ಕೇರುವುದನ್ನು ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ ಎಂದರು.

ತುರುವೇಕೆರೆ ಜೆಡಿಎಸ್ ಶಾಸಕ ಕೃಷ್ಣಪ್ಪ ಇತ್ತಿಚೆಗೆ ಹುಡುಗಿಯೊಬ್ಬಳ ಜೊತೆ ಸ್ಟೆಪ್ ಹಾಕಿರೋದನ್ನೂ ಪ್ರಸ್ತಾಪಿಸಿದ ಜಗ್ಗೇಶ್, ಶಾಸಕ ಕೃಷ್ಣಪ್ಪ ಟಪ್ಪಾಂಗುಚ್ಚಿ ಸ್ಟೆಪ್ ಹಾಕೋಕೇ ಲಾಯಕ್ಕು ಅಂದರು.

ತುರುವೇಕೆರೆ ಬಿಜೆಪಿ ಅಭ್ಯರ್ಥಿ ಮಸಾಲೆ ಜಯರಾಮ್ ಕೂಡಾ ಒಕ್ಕಲಿಗರು. ಎಚ್ ಡಿ ದೇವೇಗೌಡರೇ ಬಂದು ಮತ ಕೇಳಿದ್ರೂ ಮಸಾಲೆ ಜಯರಾಮ್ ಗೆ ಮತ ಹಾಕಿ ಎಂದ ಜಗ್ಗೇಶ್, ದೇವೇಗೌಡರು ಮತ ಕೇಳುವ ಮಿಮಿಕ್ರಿ ಮಾಡಿದರು.

 

1 ಕಾಮೆಂಟ್

Comments are closed.