ಮತ್ತೊಮ್ಮೆ ಮೈಚಳಿ ಬಿಟ್ಟು ಕುಣಿಯಲಿದ್ದಾರೆ ಟಾಲಿವುಡ್​​ ಚೆಲುವೆ! ಐಟಂ ಡ್ಯಾನ್ಸ್​ನಲ್ಲಿ ಮಿಂಚಲಿದ್ದಾರೆ ​ ಕಾಜಲ್​​​ ಅಗರ್​ವಾಲ್​!!

ಟಾಲಿವುಡ್ ನ ಮಗಧೀರನ ಚೆಲುವೆ ಕಾಜಲ್ ಅಗರ್ ವಾಲ್ ಮತ್ತೊಮ್ಮೆ ಐಟಂ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಬಿಸಿ ಬಿಸಿ ಸುದ್ದಿ ಟಾಲಿವುಡ್ ಸಿನಿಅಂಗಳದಲ್ಲಿ ಜೋರಾಗಿದೆ. ಹಾಗಾದರೆ ಅಷ್ಟಕ್ಕೂ ಕಾಜಲ್ ಹೆಜ್ಜೆ ಹಾಕಲಿರುವ ಆ ಹೊಸ ಸಿನಿಮಾ ಯಾವುದು, ಯಾರ ಜೊತೆ ಕಾಜಲ್ ಹೆಜ್ಜೆಹಾಕಲಿದ್ದಾರೆ ಎಂದು ಯೋಚಿಸುತ್ತಿದ್ದೀರಾ ಹಾಗಾದರೆ ಈ ಸ್ಟೋರಿ ಓದಿ.

ಹಲವು ಚಿತ್ರಗಳಲ್ಲಿ ಹೀರೋಹಿನ್ ಆಗಿ ಮಿಂಚಿದ್ದ ಕಾಜಲ್ ಈ ಹಿಂದೆ ಜೂನಿಯರ್ ಎನ್.ಟಿ.ಆರ್ ನ ಟಂಪರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ನಂತರ ಜೂನಿಯರ್ ಎನ್.ಟಿ.ಆರ್ ಅಭಿನಯದ ಮತ್ತೊಂದು ಚಿತ್ರ ಜನತಾ ಗ್ಯಾರೆಜ್ ಚಿತ್ರದಲ್ಲಿ ದೇವಿಶ್ರೀ ಪ್ರಸಾದ್ ಬೀಟು, ಶೇಖರ್ ಮಾಸ್ಟರ್ ಸ್ಟೆಪ್ಸುಗಳು ಹಾಗೂ ಕಾಜಲ್ ಅಗರ್​ವಾಲ್ ಗ್ಲಾಮರ್ ಮಿಕ್ಸ್​ ಆಗಿರುವ ನೇನು ಪಕ್ಕಾ ಲೋಕಲ್ ಎಂಬ ಐಟಂ ಸಾಂಗ್ ಗೆ ಮೈ ಮೂಳೆಗಳನ್ನೆಲ್ಲಾ ಮುರಿದು ಡ್ಯಾನ್ ಮಾಡುವ ಮೂಲಕ ಪಡ್ಡೆ ಹುಡುಗರ ಮೈ ಚಳಿ ಬಿಡಿಸಿದ್ದರು.

ಗೀತಾ ಮಾಧುರಿ ಕಿಕ್ಕೇರಿಸೋ ವಾಯ್ಸ್, ಕಲರ್​ಫುಲ್ ಸೆಟ್ಟು, ಕಾಜಲ್ ಹೆಜ್ಜೆಗೆ ಹೆಜ್ಜೆ ಸೇರಿಸಿದ್ದ ಜ್ಯೂನಿಯರ್ ಎನ್​ಟಿಆರ್, ಟೋಟಲಿ ಪಕ್ಕಾ ಲೋಕಲ್ ಸಾಂಗ್ ನಿಜಕ್ಕೂ ಸೌತ್ ಸಿನಿ ಇಂಡಸ್ಟ್ರೀಯಲ್ಲಿ ಧೂಳೆಬ್ಬಿಸಿತ್ತು. ಅಲ್ಲದೆ ಹೀರೋಯಿನ್ ಆಗಿದ್ದ ಕಾಜಲ್ ಹೀಗೆ ಐಟಂ ಡ್ಯಾನ್ಸರ್​ ಆಗಿ ಕುಣಿದಿದ್ದು, ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. ತಾರಕ್​ಗೋಸ್ಕರ ಈ ಐಟಂ ಸಾಂಗ್ ಮಾಡಿದ್ದೆ ಮತ್ತೆ ನೋ ಐಟಂ ಸಾಂಗ್ ಅಂತ ಕಾಜಲ್ ಈ ಹಿಂದೆ ಹೇಳಿಕೊಂಡಿದ್ರು. ಆದರೀಗಾ ಅದೇ ಕಾಜಲ್ ಮತ್ತೊಮ್ಮೆ ಪಡ್ಡೆ ಹೈಕಳ ನಿದ್ದೆಗೆಡಿಸಲು ಐಟಂ ಸಾಂಗ್ ವೊಂದಕ್ಕೆ ಹೆಜ್ಜೆಹಾಕಲು ಮುಂದಾಗಿದ್ದಾರೆ.

ಈ ಹಿಂದೆ ಜುಲಾಯಿ, ಸನ್​ ಆಫ್ ಸತ್ಯಮೂರ್ತಿ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ನಟ ಅಲ್ಲು ಅರ್ಜುನ್ ಹ್ಯಾಟ್ರಿಕ್ ಕಾಂಬಿನೇಷನ್​ನಲ್ಲಿ ಸಿನಿಮಾವೊಂದು ಬರುತ್ತಿದ್ದು, ಇನ್ನೂ ಹೆಸರಿಡದ ಈ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸದ್ಯ ಚಿತ್ರದ ಫ್ಯಾನ್ಸ್ ಮೇಡ್ ಪೋಸ್ಟರ್​​ವೊಂದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಮತ್ತು ಈ ಚಿತ್ರದ ಐಟಂ ಸಾಂಗ್ ಗೆ ಕಾಜಲ್ ಅಗಲ್ ವಾಲ್ ನನ್ನು ಕರೆತರಲು ಚಿತ್ರತಂಡ ನಿರ್ಧರಿಸಿದೆ.

ಇನ್ನೂ ಈ ಹಿಂದೆ ಆರ್ಯ-2 ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ನಟಿಯಾಗಿ ಕಾಜಲ್ ನಟಿಸಿದ್ದರು. ಸದ್ಯ ಕಾಜಲ್ ಕೈನಲ್ಲಿ ಯಾವುದೇ ದೊಡ್ಡ ಸಿನಿಮಾಗಳಿಲ್ಲದ ಕಾರಣ ತ್ರಿವಿಕ್ರಮ್​​- ಬನ್ನಿ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರದ ​ ಐಟಂ ಸಾಂಗ್​ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಕಾಜಲ್ ಮತ್ತೊಮ್ಮೆ ಐಟಂ ಡ್ಯಾನ್ಸರ್ ಆಗಿ ಕುಣಿದು ಕುಪ್ಪಳಿಸೋಕ್ಕೆ ರೆಡಿಯಾಗಿದ್ದು, ಮತ್ತೊಮ್ಮೆ ಕಾಜಲ್ ಐಟಂ ಸಾಂಗ್ ನಲ್ಲಿ ಆಭಿಮಾನಿಗಳಿಗೆ ಹೇಗೆ ಮೋಡಿ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.