ಮೊಳಕಾಲ್ಮೂರಿಗೆ ಕಿಚ್ಚ ಸುದೀಪ್ ಕಾಂಗ್ರೆಸ್ ಅಭ್ಯರ್ಥಿ !! ಕೋಟೆ ಕೈ ವಶಕ್ಕೆ ಮದಕರಿ ನಾಯಕನ ಮೊರೆ ಹೋದ ಕಾಂಗೈ !!

Actor Kiccha Sudeep Politics Entry Details
Actor Kiccha Sudeep Politics Entry Details

ಕಿಚ್ಚ ಸುದೀಪ್ ಕಾಂಗ್ರೆಸ್ ನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.

ಹೌದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ನಟ ಸುದೀಪ್ ಸ್ಪರ್ಧಿಸಲಿದ್ದಾರೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸಧ್ಯ ಬಿ ಎಸ್ ಆರ್ ಪಕ್ಷದಿಂದ ಸ್ಪರ್ಧಿಸಿದ್ದ ತಿಪ್ಪೇಸ್ವಾಮಿ ಶಾಸಕರಾಗಿದ್ದಾರೆ. 2008 ರಿಂದ 2013 ರವರೆಗೆ ಕಾಂಗ್ರೆಸ್ ನ ಎನ್ ವೈ ಗೋಪಾಲಕೃಷ್ಣ ಶಾಸಕರಾಗಿದ್ದರು.

 

 

 

 

ಈಗ ಗೋಪಾಲಕೃಷ್ಣರು ಬಳ್ಳಾರಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ.ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೇರಿದ ನಟ ಸುದೀಪ್ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅದರ ಪ್ರಭಾವ ಪಕ್ಕದ ಬಳ್ಳಾರಿಗೂ ಇರುತ್ತದೆ. ಮೊಳಕಾಲ್ಮೂರು ಮತ್ತು ಬಳ್ಳಾರಿಯಲ್ಲಿ ನಾಯಕ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದು, ಕಾಂಗ್ರೆಸ್ ಈ ತಂತ್ರಗಾರಿಕೆಗೆ ಮುಂದಾಗಿದೆ