ಪ್ರಭಾಸ್​​ ರೋಮಾನ್ಸ್​ ಪೋಟೋಗಳು ಲೀಕೌಟ್​​! ಪ್ರಭಾಸ್​​ಗೆ ಜೊತೆಗಿದ್ದ ನಟಿ ಯಾರು ಗೊತ್ತಾ?!

ಟಾಲಿವುಡ್ ನ ಖ್ಯಾತ ನಟ ಬಾಹುಬಲಿ ಪ್ರಭಾಸ್ ಬಾಹುಬಲಿ 2 ಚಿತ್ರದ ನಂತರ ‘ಸಾಹೋ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸಾಹೋ ಚಿತ್ರೀಕರಣ ಆರಂಭವಾಗಿದ್ದು, ‘ಪ್ರಭಾಸ್’ ಗೆ ಬಾಲಿವುಡ್ ನಟಿ ‘ಶ್ರದ್ಧಾ ಕಪೂರ್’ ಜೋಡಿಯಾಗಿದ್ದಾರೆ. ಸದ್ಯ ಚಿತ್ರದ ಕೆಲವು ರೊಮ್ಯಾಂಟಿಕ್ ದೃಶ್ಯದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ.

ಇದೇ ಪ್ರಥಮ ಬಾರಿಗೆ ಸೌತ್ ಸಿನಿಮಾದಲ್ಲಿ ನಟಿ ‘ಶ್ರದ್ಧಾ ಕಪೂರ್’ ನಟಿಸುತ್ತಿದ್ದಾರೆ. ಈಗಾಗಲೇ ‘ಶ್ರದ್ಧಾ’ ಹಾಗೂ ‘ಪ್ರಭಾಸ್’ ಕಾಂಬಿನೇಷನ್ ಚಿತ್ರದ ಬಗೆಗೆ ಅಭಿಮಾನಿ​ಗಳಲ್ಲಿ ಸಖತ್ ಕುತೂಹಲ ಸೃಷ್ಟಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ಫೋಟೋವನ್ನು ಚಿತ್ರತಂಡ ಅಧಿಕೃತವಾಗಿ ರಿಲೀಸ್ ಮಾಡಿಲ್ಲ. ಆದರೂ ಹೇಗೋ ಚಿತ್ರತಂಡದವರ ಕಣ್ತಪ್ಪಿಸಿ ಈ ರೀತಿ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಸದ್ಯ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿರುವ ಫೋಟೋನಲ್ಲಿ ಇಬ್ಬರು ಸಖತ್ ರೋಮ್ಯಾಂಟಿಕ್ ಆಗಿ ಕಾಣಿಸುತ್ತಿದ್ದು, ‘ಪ್ರಭಾಸ್’ ಬಿಳಿ ಬಣ್ಣದ ಶರ್ಟ್ ಧರಿಸಿ ‘ಹ್ಯಾಂಡ್ ಸಮ್’ ಆಗಿ ಕಾಣಿಸುತ್ತಿದ್ದರೆ, ‘ಶ್ರದ್ಧಾ ಕಪೂರ್’ ಪಿಂಕ್ ಬಣ್ಣದ ಡ್ರೆಸ್​ನಲ್ಲಿ ‘ಕ್ಯೂಟ್’ ಆಗಿ ಕಂಗೊಳಿಸುತ್ತಿದ್ದಾರೆ.

ಸುಮಾರು 300 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾಗುತ್ತಿರುವ ‘ಸಾಹೋ’ ಚಿತ್ರದಲ್ಲಿ ನಟ ನೀಲ್ ನಿತಿನ್ ಮುಖೇಶ್, ಅರುಣ್ ವಿಜಯ್ ಸೇರಿದಂತೆ ಮತ್ತಿತರರು ಸಾಹೋದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಚಿತ್ರವು 2019 ಆಗಸ್ಟ್ 15ರಂದು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ರಿಲೀಸ್ ಆಗಲಿದೆ.