ಚುನಾವಣೆ ನಂತರ MLA ಆಗ್ತಿದ್ದಾರೆ ನಟ ಪ್ರಥಮ್!

ಅದ್ಯಾವ ಘಳಿಗೆಯಲ್ಲಿ ಪ್ರಥಮ್ ‘ಬಿಗ್ ಬಾಸ್’ ವಿಜೇತರಾದರೋ, ಜನಪ್ರಿಯತೆ ಮತ್ತು ಅದೃಷ್ಟ ಹಿಂದೆಯೇ ಓಡೋಡಿ ಬಂದಿದೆ. ಅದೇ ಕಾರಣಕ್ಕೆ, ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಥಮ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಳ್ಳೆ ಹುಡ್ಗನ ‘ದೇವ್ರಂಥ ಮನುಷ್ಯ’ ಸಿನಿಮಾ ರಿಲೀಸ್​ ಆಗಿತ್ತು.

ಇದೀಗ ಪ್ರಥಮ್​ ಅಭಿನಯ ‘ಎಂಎಲ್​ಎ’ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಮೌರ್ಯ ಎಂಬ ಹೊಸ ಪ್ರತಿಭೆ ಈ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದು, ಚಿತ್ರದಲ್ಲಿ ಪ್ರಥಮ್ ಎಂಎಲ್​ಎ ಆಗಿ ಕಾಣಿಸಿಕೊಂಡಿದ್ದಾರೆ. ಖುದ್ದು ಪ್ರಥಮ್​ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಕೊಂಡಿರೋ ಈ ಸಿನಿಮಾದ ಆಡಿಯೋ ಇದೀಗ ಲಾಂಚ್​ ಆಗಿದೆ. ಅದ್ದೂರಿಯಾಗಿ ಸಿನಿಮಾದ ಆಡಿಯೋ ರಿಲೀಸ್​ ಮಾಡಲಾಗಿದೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಆಡಿಯೋ ಬಿಡುಗಡೆ ಮಾಡಿದ್ದಾರೆ. ಸಿನಿಮಾದಲ್ಲಿ ಒಟ್ಟು ಽ ಹಾಡುಗಳಿದೆ. ವಿಕ್ರಮ್​ ಸುಬ್ರಮಣ್ಯ ಮ್ಯೂಸಿಕ್​ ಕಂಪೋಸ್​ ಮಾಡಿದ್ದಾರೆ.

ಅಂದಹಾಗೆ ಸಿನಿಮಾದಲ್ಲಿ ನಾಯಕ ನಟ​​ ಪ್ರಾರಂಭದಲ್ಲಿ ಎಲ್ಲರಂತೆ ಸಾಮಾನ್ಯ ಹುಡುಗನಾಗಿಯೇ ಇರುತ್ತಾನೆ. ಮಧ್ಯದಲ್ಲಿ ನಡೆಯುವ ಕೆಲವೊಂದು ಸನ್ನಿವೇಶಗಳಿಂದಾಗಿ ರಾಜಕೀಯಕ್ಕೆ ಬರಬೇಕಾಗುತ್ತದೆ. ಸಿನಿಮಾದಲ್ಲಿ ಹಾಸ್ಯವಿದೆ. ಹಾಗಂತ, ರಾಜಕೀಯ ವಿಡಂಬನೆ ಇಲ್ಲ. ಮಂಗಳೂರಿನ ಬೆಡಗಿ ಸೋಹಲ್ ಮಂತೆರೋ ಈ ಚಿತ್ರದಲ್ಲಿ ಪ್ರಥಮ್ ಜತೆ ನಾಯಕಿಯಾಗಿದ್ದಾರೆ. ಮುಖ್ಯಮಂತ್ರಿಯ ಪುತ್ರಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾಗಿ ಹೆಚ್​ ಎಂ ರೇವಣ್ಣ ನಟಿಸಿದ್ದಾರೆ. ಚಿತ್ರಕ್ಕೆ ವೆಂಕಟೇಶ್ ರೆಡ್ಡಿ ಬಂಡವಾಳ ಹೂಡಿದ್ದರೆ, ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ ಹೊಣೆ ಹೊತ್ತಿದ್ದಾರೆ. ರಾಜಕೀಯದ ಸುತ್ತು ಸುತ್ತುವ ಕಥೆಯ ಎಮ್​ಎಲ್​ಎ ಚುನಾವಣೆಯ ನಂತರ ರಿಲೀಸ್​​ ಆಗಲಿದೆ.